ಹೈದರಾಬಾದ್: ಇದೇ 10ರಂದು ತೆರೆಗೆ ಬಂದ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಧೂಳೆಬ್ಬಿಸಿ ನಂತರ ತಗ್ಗಿದೆ.
ಎಸ್.ಶಂಕರ್ ನಿರ್ದೇಶನದ ಸಿನಿಮಾ ತನ್ನ ಮೊದಲ ದಿನದಂದು ಅದ್ಭುತ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಆದ್ರೆ ಎರಡನೇ ದಿನದಿಂದಲೇ ಗಳಿಕೆ ಇಳಿಕೆ ಕಾಣಲು ಶುರುವಾಯಿತು.
ಮೊದಲ ದಿನ ಭಾರತದ ಬಾಕ್ಸ್ ಆಫೀಸ್‌ನಲ್ಲಿ 51 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಪೊಲಿಟಿಕಲ್ ಥ್ರಿಲ್ಲರ್ ತನ್ನ 2ನೇ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಕುಸಿತ ಎದುರಿಸುತ್ತಿದೆ.
ಬಿಗ್ ಬಜೆಟ್ ಮತ್ತು ಹಬ್ಬದ ಸಂದರ್ಭ ಬಿಡುಗಡೆಯಾಗಿರುವುದರ ಹೊರತಾಗಿಯೂ, ಗೇಮ್ ಚೇಂಜರ್ ಆರಂಭದ ಆ ಸ್ಪೀಡ್ ಕಾಯ್ದುಕೊಳ್ಳಲು ಹೆಣಗಾಡುತ್ತಿದೆ. ಮೊದಲ ವಾರಾಂತ್ಯ ಮತ್ತು ಮೊದಲ ಸೋಮವಾರದಂದು ಗಳಿಕೆಯಲ್ಲಿ ತೀವ್ರ ಇಳಿಕೆಯಾಗಿದ್ದು, ಸಿನಿಮಾ ತನ್ನ ಬಂಡವಾಳವನ್ನೂ ವಾಪಸ್ ಪಡೆಯೋದು ಕಷ್ಟ ಎನ್ನುವಂತಿದೆ ಪರಿಸ್ಥಿತಿ.
ಚಿತ್ರದಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ, ಅಂಜಲಿ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ. ವರದಿಗಳ ಪ್ರಕಾರ, 400 ಕೋಟಿ ರೂಪಾಯಿ ಬಜೆಟ್ನ ಚಿತ್ರವಿದು.
ಚಿತ್ರವು 2ನೇ ದಿನ 21.6 ಕೋಟಿ, ಮೂರನೇ ದಿನ 15.9 ಕೋಟಿ ರೂಪಾಯಿ ಗಳಿಸಿತ್ತು. ನಾಲ್ಕನೇ ದಿನ 8.50 ಕೋಟಿಗೆ ಕುಸಿದಿದೆ. ಸೋಮವಾರದ ವೇಳೆಗೆ, ಗೇಮ್ ಚೇಂಜರ್ ಭಾರತದಲ್ಲಿ 97 ಕೋಟಿ ರೂ. ಗಳಿಸಿದೆ.