Select Your Language

Notifications

webdunia
webdunia
webdunia
webdunia

ಎಕ್ಕ ಅಡ್ಡಕ್ಕೆ ಸಂಜನಾ ಭರ್ಜರಿ ಎಂಟ್ರಿ: ಯುವನೊಂದಿಗೆ ರೊಮ್ಯಾನ್ಸ್‌ಗೆ ರೆಡಿಯಾದ ಸಲಗ ಬ್ಯೂಟಿ

Salaga beauty Sanjana Anand

Sampriya

ಬೆಂಗಳೂರು , ಮಂಗಳವಾರ, 14 ಜನವರಿ 2025 (16:12 IST)
Photo Courtesy X
ಬೆಂಗಳೂರು: ಯುವ ಚಿತ್ರ ಸಕ್ಸಸ್‌ ಬಳಿಕ ಯುವರಾಜ್‌ಕುಮಾರ್ ಅವರು ಯುವ ಸಿನಿಮಾ ಬಳಿಕ ಎರಡನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಬಹುನಿರೀಕ್ಷೆಯ ಈ ಚಿತ್ರದಲ್ಲಿ ಸಲಗ ಬ್ಯೂಟಿ ಸಂಜನಾ ಆನಂದ್ ಹೀರೋಯಿನ್ ಆಗಿದ್ದಾರೆ.

ಚಿತ್ರ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈಗಾಗಲೇ ಯುವನ ರಕ್ತಸಿಕ್ತ ಅವತಾರದ ಪೋಸ್ಟರ್ ನೋಡಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಹೀಗಿರುವಾಗ ಎಕ್ಕ ಅಡ್ಡಾಗೆ ನಾಯಕಿಯಾಗಿ ಸಲಗ ನಟಿ ಸಂಜನಾ ಎಂಟ್ರಿ ಕೊಟ್ಟಿದ್ದಾರೆ.

ಯುವ ಮತ್ತು ಸಂಜನಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಪೋಸ್ಟರ್ ಅನ್ನು ಸಂಕ್ರಾಂತಿ ಹಬ್ಬದಂದು ಚಿತ್ರತಂಡ ರಿವೀಲ್ ಮಾಡಿದೆ. ತೊದಲು ಪ್ರೀತಿಯ ಮೊದಲ ಪರಿಚಯ ಎಂದು ಪೋಸ್ಟರ್‌ಗೆ ಅಡಿಬರಹ ನೀಡಿದ್ದಾರೆ.

ರೋಹಿತ್ ಪದಕಿ ನಿರ್ದೇಶನದ ಎಕ್ಕ ಒಬ್ಬ ಯುವಕನ ಕಥೆಯನ್ನು ಹೇಳುತ್ತದೆ. ಒಬ್ಬ ಮನುಷ್ಯನು ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಹೇಳುವ ಕಥೆಯೇ ಎಕ್ಕ ಸಿನಿಮಾ.

ಚಿತ್ರದಲ್ಲಿ ಯುವ ರಾಜ್ ಕುಮಾರ್, ಸಂಪದಾ, ಅತ್ತುಲ್ ಕುಲಕರ್ಣೀ, ಶ್ರುತಿ ಕೃಷ್ಣ, ರಾಹುಲ್ ದೇವ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಿಕಥೆಯನ್ನು ರೋಹಿತ್ ಪದಕಿ ಮತ್ತು ವಿಕ್ರಮ್ ಹತ್ವಾರ್ ರಚಿಸಿದ್ದಾರೆ.

ಈ ಚಿತ್ರವನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ, ಜಯಣ್ಣ ಮತ್ತು ಭೋಗೇಂದ್ರ ಜಯಣ್ಣ ಫಿಲಂಸ್ ಲಾಂಛನದಡಿಯಲ್ಲಿ ಹಾಗು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟುಡಿಯೋಸ್ ಲಾಂಛನದಡಿಯಲ್ಲಿ ನಿರ್ಮಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಪತ್ನಿಯೊಂದಿಗೆ ನಟ ದರ್ಶನ್‌ ಸಂಕ್ರಾಂತಿ: ಅಭಿಮಾನಿಗಳ ಖುಷಿ ಹೆಚ್ಚಿಸಿದ ವಿಜಯಲಕ್ಷ್ಮಿ