Select Your Language

Notifications

webdunia
webdunia
webdunia
webdunia

ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾ ಯಾವುದು ಗೊತ್ತಾ?

webdunia
ಭಾನುವಾರ, 6 ಸೆಪ್ಟಂಬರ್ 2020 (11:41 IST)
ಹೈದರಾಬಾದ್ : ಲಾಕ್ ಡೌನ್ ಸಮಯದಲ್ಲಿ ನೈಜ ಘಟನೆ ಆಧಾರಿತ ಸಿನಿಮಾ ಮಾಡಿ ಹಣ ಮಾಡಿದ ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಮತ್ತೊಂದು ನೈಜ ಘಟನೆ ಅಧಾರಿತ ಸಿನಿಮಾ ಮಾಡಲು ಹೊರಟಿದ್ದಾರೆ.

ಕಳೆದ ವರ್ಷ ಹೈದರಾಬಾದಿನಲ್ಲಿ ನಡೆದ ಪಶು ವೈದ್ಯೆ ಮೇಲೆ ಲಾರಿ ಚಾಲಕ ಸೇರಿ 4 ಜನ ಮಾನಭಂಗ ಎಸಗಿ ಕೊಲೆ ಮಾಡಿದ್ದು, ಈ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗುವ ಮುನ್ನವೇ ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು.

ಈ ಘಟನೆಯನ್ನು ಸಿನಿಮಾ ಮಾಡಲು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ಧರಿಸಿದ್ದಾರೆ. ಈ ಸಿನಿಮಾಕ್ಕೆ ‘ದಿಶಾ ಎನ್ ಕೌಂಟರ್’ ಎಂದು ಹೆಸರಿಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ. ಹಾಗೇ ಈ ಘಟನೆ ನಡೆದಿದ್ದು ನವೆಂಬರ್ 26ರಂದು ಆದ ಕಾರಣ ಅಂದೇ ಸಿನಿಮಾ ರಿಲೀಸ್ ಮಾಡಲು ವರ್ಮಾ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಸಂಯುಕ್ತಾ ಹೆಗಡೆ ಪಾರ್ಕ್ ಗಲಾಟೆ: ನವರಸನಾಯಕ ಜಗ್ಗೇಶ್ ಹೇಳಿದ್ದೇನು?