Daily Horoscope
✕

ಅಪ್ಪು ಅಭಿಮಾನಿಗಳ ಅಭಿಮಾನಕ್ಕೆ ಸಾಟಿ ಏನು?!

Webdunia
ಗುರುವಾರ, 11 ನವೆಂಬರ್ 2021 (11:16 IST)
ಬಾಗಲಕೋಟೆ : ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅಗಲಿಕೆ ನೋವು ಕಡಿಮೆಯಾಗುತ್ತಿಲ್ಲ.
ಅಪ್ಪು ಸಮಾಧಿ ದರ್ಶನ ಮಾಡಲು ಕಂಠೀರವ ಸ್ಟೇಡಿಯಂಗೆ ಪ್ರತಿದಿನ ಜನ ಸಾಗರವೇ ಹರಿದು ಬರುತ್ತಿದೆ. ಸಮಾಧಿ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ನಡುವೆ ಯುವರತ್ನನ ಅಭಿಮಾನಿಯೊಬ್ಬರು ಸಮಾಧಿ ಭೇಟಿಗೆ ಸೈಕಲ್ ಯಾತ್ರೆ ಮೂಲಕ ಬಾಗಲಕೋಟೆಯಿಂದ ಬರುತ್ತಿದ್ದಾರೆ.
ನಿನ್ನೆ (ನ.10) ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಿಂದ ಅಭಿಮಾನಿ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದಾರೆ. ರಾಘವೇಂದ್ರ ಗಾಣಿಗೇರ ಎಂಬ ಅಭಿಮಾನಿ ಸೈಕಲ್ ಯಾತ್ರೆ ಹೊರಟಿದ್ದು, ನಿನ್ನೆ ರಾತ್ರಿ ಹುನಗುಂದ ತಲುಪಿ, ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಿಗ್ಗೆ ಹುನಗುಂದ ಪಟ್ಟಣದಿಂದ ಸೈಕಲ್ ಯಾತ್ರೆ ಶುರುವಾಗಿದೆ. ಹುನಗುಂದ ಪಟ್ಡಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಪ್ಪು ಅಭಿಮಾನಿಗಳಿಂದ ಸೈಕಲ್ ಯಾತ್ರೆ ಹೊರಟ ಅಭಿಮಾನಿಗೆ ಸನ್ಮಾನ ಮಾಡಿದ್ದಾರೆ.
ಬಾದರದಿನ್ನಿ ಗ್ರಾಮದಿಂದ ಸುಮಾರು 600 ಕಿಲೋಮೀಟರ್ ಸೈಕಲ್ ಯಾತ್ರೆಯಲ್ಲಿ ಬೆಂಗಳೂರು ತಲುಪಲಿದ್ದಾರೆ. ಕನ್ನಡ ಧ್ವಜ ಸೈಕಲ್ಗೆ ಸಿಕ್ಕಿಸಿ, ಸೈಕಲ್ ಹಿಂದೆ ಮುಂದೆ ಅಪ್ಪು ಭಾವಚಿತ್ರ ಕಟ್ಟಿಕೊಂಡು ಅಭಿಮಾನಿ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ. ರಾಘವೇಂದ್ರ ಗಾಣಿಗೇರ ಪುನೀತ್ ಮೃತಪಟ್ಟ ದಿನವೇ ಹೋಗಬೇಕು ಅಂತ ಅಂದುಕೊಂಡಿದ್ದರಂತೆ. ಆದರೆ ಅನಾರೋಗ್ಯ ಕಾರಣದಿಂದ ಈಗ ಸೈಕಲ್ ಯಾತ್ರೆ ಮೂಲಕ ಸಮಾಧಿ ವೀಕ್ಷಣೆಗೆ ಹೊರಟಿದ್ದಾರೆ. ಹುನಗುಂದ, ಇಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ನೀವು ಮದುವೆಯಾಗಿಲ್ಲಾಂದ್ರೆ ನಿಮ್ಮನ್ನೇ ಮದುವೆಯಾಗ್ತಿದ್ದೆ ಎಂದು ಸಂಗೀತಾ ಗಂಡನಿಗೆ ಹೇಳಿದ್ದರಂತೆ ಕಾವ್ಯಾ

ಚಿಲ್ಲರೆ ಬದಲಿಗೆ ಚಾಕಲೇಟ್ ನೀಡಿದಾಗ ನಾನಾ ಪಾಟೇಕರ್ ಏನು ಮಾಡಿದ್ರು: ಈ ಐಕಾನಿಕ್ ದೃಶ್ಯ ಈಗಲೂ ವೈರಲ್ Video

ನಟ ನಾನಾ ಪಾಟೇಕರ್ ಇನ್ನಿಲ್ಲ: ಹೃದಯಾಘಾತಕ್ಕೆ ಬಲಿಯಾಯ್ತು ಚಿತ್ರರಂಗದ ಮತ್ತೊಂದು ಪ್ರತಿಭೆ

ಚಿತ್ರದುರ್ಗದಲ್ಲಿ ಶಿವಣ್ಣನ ಎದುರೇ ಬ್ಲಾಸ್ಟ್ ಆದ ಪಟಾಕಿ: ಬೇಲ್ ಪ್ರಚಾರದ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ನಟ

BBK13: ಕಿಚ್ಚನ ಬುದ್ಧಿ ಮಾತಿಗೂ ಬೆಲೆ ಇಲ್ಲ.. ವೀಕೆಂಡ್ ನಲ್ಲಿ ತಪ್ಪಾಯ್ತು ಎನ್ನೋದು, ಗೇಮ್ ನಲ್ಲಿ ಮತ್ತದೇ ತಪ್ಪು ಮಾಡೋದು

ಮುಂದಿನ ಸುದ್ದಿ
Show comments