ನಟಸಾರ್ವಭೌಮ ಚಿತ್ರಕ್ಕೆ ‘ರಚಿತಾ ಬೇಡ’ ಎಂದು ಪುನೀತ್ ಅಭಿಮಾನಿಗಳ ಟ್ವೀಟರ್ ಅಭಿಯಾನಕ್ಕೆ ರಚಿತಾ ರಾಮ್ ಹೇಳಿದ್ದೇನು?

Webdunia
ಬುಧವಾರ, 21 ಮಾರ್ಚ್ 2018 (06:09 IST)
ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ‘ನಟಸಾರ್ವಭೌಮ’ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಆಯ್ಕೆಮಾಡಿದ ಕಾರಣ ಪುನೀತ್ ಅಭಿಮಾನಿಗಳು ಟ್ವೀಟರ್ ನಲ್ಲಿ ‘ರಚಿತಾ ಬೇಡ’ ಅಭಿಯಾನವನ್ನು ಶುರುಮಾಡಿರುವುದರ ಬಗ್ಗೆ ನಟಿ ರಚಿತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



'ನಟ ಸಾರ್ವಭೌಮ' ಚಿತ್ರಕ್ಕೆ ಈ ಹಿಂದೆ ಪ್ರಿಯಾಂಕಾ ಜ್ವಾಲಾಕರ್‌ ಅವರನ್ನು ನಿರ್ದೇಶಕರು ನಾಯಕಿಯಾಗಿ ಆಯ್ಕೆ ಮಾಡಿದ್ದು ನಂತರ ಅವರಿಗೆ ಡೇಟ್‌ಗಳ ಸಮಸ್ಯೆಯಾದ ಕಾರಣ ಆ ಜಾಗಕ್ಕೆ ರಚಿತಾ ಅವರನ್ನು ಆಯ್ಕೆ ಮಾಡಿದ್ದರು. ಈ ಬಗ್ಗೆ ಪುನೀತ್ ಅವರ ಅಭಿಮಾನಿಗಳು  ರಚಿತಾ ಅವರನ್ನು ಕೈ ಬಿಡುವಂತೆ ಒತ್ತಾಯಿಸುತ್ತಿರುವುದಕ್ಕೆ ಬೇಸರಗೊಂಡ  ನಟಿ ರಚಿತಾ ರಾಮ್ ಅವರು,’ ಈ ರೀತಿ ನನಗೆ ಯಾಕೆ ಟ್ವೀಟ್‌ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಚಿತ್ರದ ಪಾತ್ರ ನನಗೆ ಒಪ್ಪುತ್ತದೆ ಎನ್ನುವ ಕಾರಣಕ್ಕೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ.



ರಚಿತಾ ಕನ್ನಡದ ಹುಡುಗಿ. ನಮ್ಮವರು ಎಂದು ಹೇಳುವವರೇ ನನ್ನ ಬಗ್ಗೆ ಇಂಥ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ರಚಿತಾ ಬೇಡ ಎಂದು ಆನ್‌ಲೈನ್‌ ಅಭಿಯಾನ ಮಾಡುತ್ತಿರುವುರಿಂದ ನನಗೆ ನಿಜಕ್ಕೂ ನೋವಾಗಿದೆ. ಒಂದು ಚಿತ್ರಕ್ಕೆ ನಾಯಕಿ ಆಯ್ಕೆಯಾಗಬೇಕಾದರೆ, ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರತಂಡ ಎಲ್ಲರೂ ಚರ್ಚೆ ಮಾಡಿ ಫೈನಲ್‌ ಮಾಡುತ್ತಾರೆ. ಹಾಗಾಗಿ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಇದನ್ನು ಯಾರು ಮಾಡುತ್ತಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಎಂಬುದು ನನಗೆ ತಿಳಿದಿಲ್ಲ. ನಾನು ತಪ್ಪು ಮಾಡಿಲ್ಲ. ಸಿನಿಮಾ ಮಾತ್ರ ಮಾಡುತ್ತಿದ್ದೇನೆ. 'ರಣವಿಕ್ರಮ’ ಸಿನಿಮಾದಿಂದ ಹೊರಗೆ ಬಂದೆ ಎನ್ನುವ ಕಾರಣಕ್ಕೆ ಇದೆಲ್ಲಾ ಆಗುತ್ತಿರಬಹುದು. ಆದರೆ ಈ ಚಿತ್ರಕ್ಕೂ ಪವನ್‌ ಅವರೇ ನಿರ್ದೇಶಕರು, ಪುನೀತ್‌ ಅವರೇ ನಾಯಕರು. ಆದರೂ ನನ್ನನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಇದರರ್ಥ ನಾನೇನು ತಪ್ಪು ಮಾಡಿಲ್ಲ ಎಂದು ಅರ್ಥವಲ್ಲವೆ?



ಯಾವುದೇ ತಪ್ಪು ಮಾಡದಿರುವ ನನ್ನ ಮೇಲೇಕೆ ಈ ಮಟ್ಟಿಗಿನ ಕೋಪ ಎಂಬುದು ನನಗೆ ತಿಳಿಯುತ್ತಿಲ್ಲ. ರಚಿತಾ ಎನ್ನುವ ಅಂಶ ಪಕ್ಕಕ್ಕಿಟ್ಟರೆ ಒಬ್ಬ ಹೆಣ್ಣುಮಗಳಾಗಿಯೂ ನನಗೆ ನೋವಾಗಿದೆ. ಈ ವಿಚಾರವಾಗಿ ಪುನೀತ್‌ ಅವರು ರಿಲ್ಯಾಕ್ಸ್‌ ಆಗಿರಿ. ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ ಎಂದು ನನಗೆ ಧೈರ್ಯ ಹೇಳಿದ್ದಾರೆ' ಎಂದು  ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments