ಮೋದಿಯನ್ನು ಬೈಯುವ ಪ್ರಕಾಶ್ ರಾಜ್‌ ಸಮಾಜಕ್ಕಾಗಿ ಏನು ಮಾಡಿದ್ದಾರೆ - ಹುಚ್ಚ ವೆಂಕಟ್

Webdunia
ಶನಿವಾರ, 5 ಮೇ 2018 (07:12 IST)
ಮಡಿಕೇರಿ : ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟ ಹುಚ್ಚ ವೆಂಕಟ್ ಅವರು ಇದೀಗ ಪ್ರಧಾನಿ ಮೋದಿ  ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ನಟ ಪ್ರಕಾಶ್ ರೈ ವಿರುದ್ಧ ಸಿಡಿದೆದ್ದಿದ್ದಾರೆ.


ಈ ಬಗ್ಗೆ ಮಾತನಾಡಿದ  ಅವರು,’ ಮೋದಿ ನನ್ನ ಅಚ್ಚುಮೆಚ್ಚಿನ ನಾಯಕ. ಚಿತ್ರನಟ ಪ್ರಕಾಶ್ ರಾಜ್‌ಗೆ ಮಾಡಲು ಯಾವುದೇ ಕೆಲಸಗಳಿಲ್ಲ. ಆದ್ದರಿಂದ ಹೋದಲ್ಲೆಲ್ಲ ಸಿನಿಮಾ  ಡೈಲಾಗ್ ಹೊಡೆಯುತ್ತಿದ್ದಾರೆ. ಇದನ್ನು ಸಿನಿಮಾದಲ್ಲಿ ಮಾತ್ರ ಜನರು ಇಷ್ಟಪಡುತ್ತಾರೆಯೇ ಹೊರತು, ರಿಯಲ್ ಲೈಫ್‌ನಲ್ಲಿ ಈ ಡೈಲಾಗ್ ವರ್ಕೌಟ್ ಆಗಲ್ಲ. ಉತ್ತಮ ವಿಚಾರಗಳನ್ನು ಎಲ್ಲರೂ ಇಷ್ಟಪಡಬೇಕೆಂದೇನೂ ಇಲ್ಲ. ಹಾಗೆಯೇ ಪ್ರಧಾನಿ ಮೋದಿ ಎಲ್ಲರಿಗೂ ಇಷ್ಟವಾಗಬೇಕೆಂದೂ ಇಲ್ಲ. ಮೋದಿ ಬಗ್ಗೆ ಮಾತನಾಡಬೇಕಾದ್ರೆ ಯೋಗ ಮತ್ತು ಯೋಗ್ಯತೆ ಎರಡೂ ಇರಬೇಕು’ ಎಂದು ಹೇಳಿದ್ದಾರೆ.


ಹಾಗೇ ‘ಪ್ರಕಾಶ್ ರಾಜ್‌ ಯಾವತ್ತೂ ದೇಶವನ್ನು ಪ್ರೀತಿಸಲ್ಲ. ಯೋಗ್ಯರ ಬಗ್ಗೆ ಅಸೂಯೆ ಪಡುತ್ತಿದ್ದಾರೆ. ಪ್ರಚಾರಕ್ಕಾಗಿ  ಮೋದಿ ವಿರುದ್ಧ ಭಾಷಣ ಮಾಡುತ್ತಿದ್ದಾರೆ. ಮೋದಿಯನ್ನು ಬೈಯುವ ಪ್ರಕಾಶ್ ರಾಜ್‌ ಸಮಾಜಕ್ಕಾಗಿ ಏನು ಮಾಡಿದ್ದಾರೆ. ಸಿನಿಮಾದಲ್ಲಿ ವಿಲನ್ ಎಂದು ಹೆಸರು ಪಡೆದ ನೀನು, ಜೀವನದಲ್ಲಿ ವಿಲನ್ ಆಗಬೇಡ. ಮೊದಲು ದೇಶದ ಪ್ರಧಾನಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಿ’ ಎಂದು ಅವರು  ಸಲಹೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ರಿಷಬ್ ಶೆಟ್ಟಿ ಹೇಳಿದ್ದಕ್ಕೆ ಕಾಂತಾರ ಚಾಪ್ಟರ್ 1 ಗಾಗಿ ಮೂರು ದಿನ ಬೀಚ್ ನಲ್ಲಿ ಮಲಗಿದ್ದ ಮಲಯಾಳಿ ನಟ

ಕೊನೆ ಕ್ಷಣದಲ್ಲಿ ರಾಜು ತಾಳಿಕೋಟೆ ಕೇಳಿಕೊಂಡಿದ್ದು ಇದೇ ಮಾತು: ಕೇಳಿದ್ರೆ ಕಣ್ಣೀರೇ ಬರುತ್ತೆ

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದವರು ಯಾರು ಕೇಳಿದ್ರೆ ಶಾಕ್ ಆಗ್ತೀರಿ

Video: ಪಂಚೆ ಕಟ್ಟೋದು ಹೇಗೆ ಹೇಳ್ಕೊಡು: ರಿಷಬ್ ಶೆಟ್ಟಿಗೆ ಬೇಡಿಕೆಯಿಟ್ಟ ಅಮಿತಾಭ್ ಬಚ್ಚನ್

ಮುಂದಿನ ಸುದ್ದಿ
Show comments