Select Your Language

Notifications

webdunia
webdunia
webdunia
Thursday, 3 April 2025
webdunia

ನಟಿ ಸಮಂತಾ ಕೇಳಿದ ಈ ಪ್ರಶ್ನೆಗೆ ಚಿರಂಜೀವಿ ಹೇಳಿದ್ದೇನು?

ಹೈದರಾಬಾದ್
ಹೈದರಾಬಾದ್ , ಬುಧವಾರ, 6 ಜನವರಿ 2021 (10:20 IST)
ಹೈದರಾಬಾದ್ : ತೆಲುಗು ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ನಟಿ ಸಮಂತಾ ಅಕ್ಕಿನೇನಿ ‘ಸ್ಯಾಮ್ ಜಾಮ್’ ಎಂಬ ಟಾಕ್ ಶೋ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರು ಭಾಗವಹಿಸಿದ್ದಾರೆ.

ಈ ಸಂಚಿಕೆಯಲ್ಲಿ ಭಾಗವಹಸಿದ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ವೃತ್ತಿ, ವೈಯಕ್ತಿಕ ಜೀವನ ಮತ್ತು ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ನಟ ಚಿರಂಜಿವಿ ಅವರ ಬಳಿ “ ಜೀವನವನ್ನು ರಿವೈಂಡ್ ಮಾಡಲು ನಿಮಗೆ ಅವಕಾಶವಿದ್ದರೆ ನೀವು ಏನು ಬದಲಾಯಿಸಲು ಬಯಸುತ್ತೀರಿ? ಎಂದು ಸಮಂತಾ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಚಿರಂಜೀವಿ, ‘ಈ ಅವಕಾಶ ನಿಜವಾಗಿಯೂ ನನಗೆ ಸಿಕ್ಕರೆ ನಾನು ನಿಖರವಾಗಿ ಒಂದು ವರ್ಷ ಹಿಂದಕ್ಕೆ ಹೋಗಿ ಚೀನಾದಲ್ಲಿ ಕರೋನಾ ವೈರಸ್ ಸೋರಿಕೆಯಾದ ಕಾರಣ  ವೈರಸ್ ಹೊರಬರದಂತೆ ತಡೆಗೋಡೆ ಕಟ್ಟಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಕಾರ್ಯದಲ್ಲಿ ಕೈಜೋಡಿಸಿದ ನಟ ಜೂನಿಯರ್ ಎನ್ ಟಿಆರ್