Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮತ್ತೆ ಈ ಚಿತ್ರದಲ್ಲಿ ಒಂದಾಗಲಿದ್ದಾರೆ ಆರ್ಯ-ಅಲ್ಲು ಅರ್ಜುನ್ ಜೋಡಿ

webdunia
ಮಂಗಳವಾರ, 5 ಜನವರಿ 2021 (10:32 IST)
ಹೈದರಾಬಾದ್ : ನಿರ್ದೇಶಕ ಸುಕುಮಾರ್ ಅವರ ಪುಷ್ಪಾ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಅವರು ನಟಿಸುತ್ತಿದ್ದಾರೆ. ಹಾಗೇ ನಿರ್ದೇಶಕ ಸುಕುಮಾರ್ ಅವರು ಈ ಚಿತ್ರಕ್ಕಾಗಿ ತಮಿಳು ಮತ್ತು ಹಿಂದಿ ನಟರನ್ನು ಪ್ರಮುಖ ಪಾತ್ರಗಳಿಗೆ ಆಯ್ಕೆ ಮಾಡಲಾಗುತ್ತದೆ.

ಈ ಚಿತ್ರ ಪ್ರಾರಂಭವಾಗುವ ಮೊದಲು ವಿಜಯ್ ಸೇತುಪತಿಯನ್ನು ಪ್ರಮುಖ ಪಾತ್ರಕ್ಕಾಗಿ ಆಯ್ಕೆ ಮಾಡಲಾಗಿದೆ. ಆದರೆ ಕೆಲವು ಕಾರಣಗಳಿಂದ ವಿಜಯ್ ಸೇತುಪತಿ ಪುಷ್ಪಾ ಚಿತ್ರದಿಂದ ಹೊರಬಂದಿದ್ದಾರೆ. ಹಾಗಾಗಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ಈ ಮಧ್ಯೆ ಹಲವಾರು ನಟರ ಹೆಸರು ಕೇಳಿಬಂದಿದ್ದು, ಇದೀಗ ತಮಿಳು ನಾಯಕ ಆರ್ಯ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಅರ್ಜುನ್ ಹಾಗೂ ಆರ್ಯ ಈ ಹಿಂದೆ ಜೊತೆಯಾಗಿ ನಟಿಸಿದ್ದರು. ಇದೀಗ ಮತ್ತೆ ಈ ಜೋಡಿ ಒಂದಾಗಲಿದೆ ಎನ್ನಲಾಗಿದೆ.   

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ 100% ಚಿತ್ರಮಂದಿರ ಭರ್ತಿಗೆ ಒಪ್ಪಿದ ಸರ್ಕಾರ: ಕರ್ನಾಟಕದಲ್ಲಿ ಯಾವಾಗ?