ಬಾಲಿವುಡ್ ನಟಿ ಸಾರಾ ಅಲಿ ಖಾನ್ ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ.
ಯಾವುದೇ ಚಿತ್ರದ ಚಿತ್ರೀಕರಣಕ್ಕೆ ನಟಿ ಗೋವಾಕ್ಕೆ ಬಂದಿಲ್ಲ.
ಬದಲಾಗಿ, ಕೊರೊನಾ ವೈರಸ್ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಟಿ ಗೋವಾಕ್ಕೆ ಬಂದಿದ್ದಾರೆ.
ಅಂದ್ಹಾಗೆ, ತಾಯಿ ಅಮೃತಾ ಸಿಂಗ್ ಹಾಗೂ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆಗೆ ಗೋವಾದಲ್ಲಿ ಎಂಜಾಯ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.