ಶಂಕಿತ ಉಗ್ರನ ರೀತಿ ಟ್ರೀಟ್ ಮೆಂಟ್: ತಲೆಕೆಟ್ಟ ದರ್ಶನ್ ಜೈಲಿನಲ್ಲಿ ಮಾಡಿದ್ದೇನು

Krishnaveni K
ಬುಧವಾರ, 11 ಸೆಪ್ಟಂಬರ್ 2024 (12:56 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಈಗ ಬಳ್ಳಾರಿ ಜೈಲಿನಲ್ಲಿ ಕಟ್ಟುನಿಟ್ಟಿನ ರೂಲ್ಸ್ ಒಂದೆಡೆಯಾದರೆ ಚಾರ್ಜ್ ಶೀಟ್ ನಲ್ಲಿರುವ ವಿವರಗಳು ಬಹಿರಂಗವಾಗಿ ತಲೆಕೆಟ್ಟು ಹೋಗಿದೆ. ಇದರಿಂದ ಅವರು ಮಾಡಿದ್ದೇನು ನೋಡಿ.

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಇದಾಗಿ 10 ದಿನಗಳೇ ಕಳೆದಿವೆ. ಇಲ್ಲಿ ದರ್ಶನ್ ಗೆ ಕಟ್ಟುನಿಟ್ಟಿನ ನಿಯಮ ಹಾಕಲಾಗಿದೆ. ದರ್ಶನ್ ರನ್ನು ವಿಐಪಿ ಸೆಲ್ ನಲ್ಲಿರಿಸಿದ್ದು, ಯಾವುದೇ ಐಷಾರಾಮಿ ಸವಲತ್ತು ನೀಡದಂತೆ ನೋಡಿಕೊಳ್ಳಲಾಗುತ್ತಿದೆ.

ಆದರೆ ಮೊನ್ನೆಯಷ್ಟೇ ಅವರ ಮನವಿ ಮೇರೆಗೆ ಟಿವಿ ಫಿಕ್ಸ್ ಮಾಡಿಕೊಡಲಾಗಿತ್ತು. ಅದರ ಹೊರತು ಅವರಿಗೆ ಬೇರೆ ಖೈದಿಗಳೊಂದಿಗೆ ಬೆರೆಯುವ ಅವಕಾಶವೇ ಇಲ್ಲ. ಏಕಾಂಗಿಯಾಗಿ ವಿಶೇಷ ಸೆಲ್ ನಲ್ಲಿ ಕುಳಿತಿರುವ ಅವರನ್ನು ಶಂಕಿತ ಉಗ್ರನಿಗೆ ನೀಡುವ ಕಟ್ಟು ನಿಟ್ಟಿನ ನಿಯಮದಲ್ಲಿ ನೋಡಿಕೊಳ್ಳಲಾಗುತ್ತಿದೆ.

ಚಾರ್ಜ್ ಶೀಟ್ ವಿವರಗಳನ್ನು ದರ್ಶನ್ ಟಿವಿಯಲ್ಲೇ ನೋಡಿಕೊಳ್ಳುತ್ತಿದ್ದರು. ಇದೀಗ ಚಾರ್ಜ್ ಶೀಟ್ ನಲ್ಲಿ ತಮ್ಮ ವಿರುದ್ಧ ಬಂದಿರುವ ವಿವರಗಳನ್ನು ನೋಡಿ ಅಕ್ಷರಶಃ ದಿಕ್ಕೆಟ್ಟಿರುವ ದರ್ಶನ್ ಟಿವಿಯೇ ಬೇಡ, ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರಂತೆ. ಚಾರ್ಜ್ ಶೀಟ್ ವಿವರಗಳನ್ನು ನೋಡಿದ ಬಳಿಕ ಪತ್ನಿಗೆ ಕರೆ ಮಾಡಿರುವ ದರ್ಶನ್ ಜೈಲಿಗೆ ಬರಲು ಮನವಿ ಮಾಡಿದ್ದಾರೆ. ನಾಳೆ ಮತ್ತೆ ಅವರ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಪತ್ನಿಯ ಜೊತೆ ಮಾತುಕತೆ ನಡೆಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ಮುಂದಿನ ಸುದ್ದಿ
Show comments