Select Your Language

Notifications

webdunia
webdunia
webdunia
webdunia

ತನ್ನ ಕಣ್ಣೆದುರೆ ಅಭಿಮಾನಿಗಳು ಮೇಲಿದ್ದ ಬಿದ್ದಾಗ ಯಶ್ ಹೇಗೆ ನಡೆದುಕೊಂಡ್ರು ನೋಡಿ, Video

Actor Yash
Photo Credit X
ಯಶ್ ಅವರು ವೇದಿಕೆಯಲ್ಲಿ ಮಾತನಾಡುತ್ತಿರುವಾಗಲೇ ಅಭಿಮಾನಿಯೊಬ್ಬ ಕುಸಿದು ಬಿದ್ದಾಗ ಮಾತನ್ನು ನಿಲ್ಲಿಸಿ, ಅವರ ಆರೋಗ್ಯವನ್ನು ವಿಚಾರಿಸುವಂತೆ ಕೇಳಿಕೊಂಡಿದ್ದಾರೆ. ಅದಲ್ಲದೆ ಹುಷಾರು ಎಂದು ಕಿವಿಮಾತು ನೀಡಿದ್ದಾರೆ. 

ನಟ ಯಶ್ ಅವರ ಕಾಳಜಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಬೇಕೆಂದು ಅಭಿಮಾನಿಗಳು ಅಲ್ಲೇ ಇದ್ದ ಸೌಂಡ್ ಬಾಕ್ಸ್‌ನ ಮೇಲೇರಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಆಯಾತಪ್ಪಿ ಅಲ್ಲಿಂದ್ದ ಕೆಳಗೆ ಬಿದ್ದಿದ್ದಾನೆ.  ಇದನ್ನು ಗಮನಿಸಿದ ಯಶ್‌ ಅವರು ಕೂಡಲೇ ಅವರ ಆರೈಕೆ ಮಾಡುವಂತೆ ಕೇಳಿಕೊಂಡಿದ್ದಾರೆ. 

ಆಗಸ್ಟ್ 22 ರಂದು ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಯಶ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬೃಹತ್ ಪೂರ್ವ-ಬಿಡುಗಡೆ ಸಮಾರಂಭದಲ್ಲಿ ಭಾರೀ ಅಭಿಮಾನಿಗಳು ಸೇರಿದ್ದರು. 

ನಟನೊಂದಿಗೆ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಭಾಗವಹಿಸಿ ಕನಸುಗಳು ಹಾಗೂ ಜಾಗತಿಕ ಸಿನೆಮಾದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಆಗಸ್ಟ್ 26 ರಂದು 12,000 ಪರದೆಗಳಲ್ಲಿ ಬಹುಭಾಷಾ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರಕ್ಕೆ ಭಾರಿ ಬೇಡಿಕೆಯಿದ್ದು, 'ಬುಕ್‌ಮೈಶೋ' ನಲ್ಲಿ 5,21,880 ಕ್ಕೂ ಹೆಚ್ಚು ಟಿಕೆಟ್‌ಗಳ ಮುಂಗಡ ಬುಕಿಂಗ್ ಹಾಗೂ ಅಮೆರಿಕದ ಪ್ರೀಮಿಯರ್ ಪ್ರದರ್ಶನಗಳಿಂದ 2,10,130 ಡಾಲರ್ ಗಳಿಕೆಯಾಗಿದೆ.

ಕಾರ್ಯಕ್ರಮದ ವೇಳೆ ಸೌಂಡ್ ಬಾಕ್ಸ್ ಕುಸಿದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡರು, ಆದರೆ ಯಶ್ ತಕ್ಷಣವೇ ಮಧ್ಯಪ್ರವೇಶಿಸಿ ಅವರಿಗೆ ಸೂಕ್ತ ನೆರವು ಸಿಗುವಂತೆ ನೋಡಿಕೊಂಡರು ಮತ್ತು ನಂತರ 45,000 ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಸುಗಮವಾಗಿ ಮುಂದುವರಿಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಇದೆಂಥಾ ಅವಘಡ, ಇಬ್ಬರು ಅಭಿಮಾನಿಗಳಿಗೆ ಗಾಯ