Daily Horoscope

Select Your Language

Notifications

webdunia
webdunia
webdunia
webdunia

ಯಶ್‌ ಸಿನಿಮಾ ದೃಷ್ಟಿಕೋಣ ನನ್ನನ್ನು ಬೆರಗುಗೊಳಿಸಿತು: ಲೇಡಿ ಸೂಪರ್‌ಸ್ಟಾರ್‌ ನಯನತಾರಾ

Nayanathara
Photo Courtesy X
ನಟ ಯಶ್‌ಗೆ ಸಿನಿಮಾ ಮೇಲಿನ ಪ್ರೀತಿ ಬಗ್ಗೆ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲೇಡಿ ಸೂಪರ್‌ಸ್ಟಾರ್' ನಯನತಾರಾ ಅವರು ತಮ್ಮ ಚಲನಚಿತ್ರಗಳ ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ, ಆದರೆ ಇತ್ತೀಚೆಗೆ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'  ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. 

ಶನಿವಾರ ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ನಯನತಾರಾ, ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ನಟ ಯಶ್ ಅವರೊಂದಿಗೆ ಕೆಲಸ ಮಾಡಿದ ಅನುಭವದ ಕುರಿತು ಮಾತನಾಡಿದರು. ಜೊತೆಗೆ, ತಮ್ಮ ಸಹನಟಿಯರಾದ ರುಕ್ಮಿಣಿ ವಸಂತ್ ಮತ್ತು ಕಿಯಾರಾ ಅಡ್ವಾಣಿ ಅವರನ್ನೂ ಅವರು ಶ್ಲಾಘಿಸಿದರು.

ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಲು ಪ್ರಾರಂಭಿಸಿದ ನಯನತಾರಾ, ತಾವು ಏಕೆ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂಬುದನ್ನು ವಿವರಿಸಿದರು. "ನನಗೆ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಷ್ಟವಿಲ್ಲ ಎಂದಲ್ಲ; ಆದರೆ ಆ ಕೆಲಸದಲ್ಲಿ ನಾನು ಅಷ್ಟೊಂದು ಪರಿಣಿತಳಲ್ಲ. ಸಾಮಾನ್ಯವಾಗಿ ನಾನು ಅಂತಹ ಕಾರ್ಯಕ್ರಮಗಳಿಂದ ದೂರವಿರುತ್ತೇನೆ, ಆದರೆ ಇದು ವಿಶೇಷವಾಗಿತ್ತು. ಯಶ್ ಅವರ ಒಂದು ಕರೆ ಸಾಕಿತ್ತು ನಾನು ಈ ಕಾರ್ಯಕ್ರಮಕ್ಕೆ ಬರಲು. ಇವರು ಹೊಂದಿರುವ ದೃಷ್ಟಿಕೋನ (vision) ಅದ್ಭುತವಾದುದು; ಗೀತು ಅವರ ಆಲೋಚನೆ ಅಥವಾ ದೃಷ್ಟಿಕೋನದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಮ್ಮ ನಿರ್ಮಾಪಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ಕೆಲಸ ಮಾಡಿದ ಅತ್ಯುತ್ತಮ ನಿರ್ಮಾಪಕರಲ್ಲಿ ಇವರೂ ಒಬ್ಬರು," ಎಂದು ಅವರು ಹೇಳಿದರು.

ನಯನತಾರಾ ಅವರು ತಮ್ಮ ಸಹನಟ ಯಶ್ ಅವರನ್ನೂ ಮುಕ್ತಕಂಠದಿಂದ ಶ್ಲಾಘಿಸಿದರು ಮತ್ತು ಅವರನ್ನು ಪ್ರೀತಿಯಿಂದ "ರಾಕಿ ಭಾಯ್" ಎಂದು ಕರೆದರು. 

"ನಾನು ಯಶ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ... ನಾನು ಅನೇಕ ಸೂಪರ್‌ಸ್ಟಾರ್‌ಗಳು ಮತ್ತು ನಟರೊಂದಿಗೆ ಕೆಲಸ ಮಾಡಿದ್ದೇನೆ; ಅವರೆಲ್ಲರೂ ದೊಡ್ಡ ಮಟ್ಟದವರು ಮತ್ತು ಉತ್ತಮ ವ್ಯಕ್ತಿತ್ವದವರು. ಆದರೆ ಯಶ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ತೆರೆಯ ಮೇಲೆ ಅವರಿಗಿರುವ ಆ ಭವ್ಯವಾದ ವ್ಯಕ್ತಿತ್ವವು (larger-than-life image) ಅವರ ನಿಜ ಜೀವನದಲ್ಲೂ ಹಾಗೆಯೇ ಇರುವುದನ್ನು ಕಂಡೆ. ಅವರಿಗಿಂತ ಹೆಚ್ಚು ಶ್ರಮಜೀವಿಯಾದ ನಟನನ್ನು ನಾನು ಎಂದಿಗೂ ನೋಡಿಲ್ಲ. ಚಿತ್ರೀಕರಣದ ಸೆಟ್‌ನಲ್ಲಿ ಪ್ರತಿದಿನವೂ ಅವರು ಕೆಲಸ ಮಾಡುತ್ತಿದ್ದ ರೀತಿ ನನ್ನನ್ನು ಬೆರಗುಗೊಳಿಸುತ್ತಿತ್ತು. ಈ ವ್ಯಕ್ತಿ ತಮ್ಮ ಜೀವನದ ನಾಲ್ಕೂವರೆ ವರ್ಷಗಳನ್ನು ಇದಕ್ಕಾಗಿ ಮೀಸಲಿಟ್ಟರು. ಅವರು ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯಬೇಕಿದ್ದ ಸಮಯವನ್ನೂ ತ್ಯಾಗ ಮಾಡಿದರು; ಅವರ ಸಂಪೂರ್ಣ ಗಮನ ಕೆಲಸದ ಮೇಲೆಯೇ ಇತ್ತು. ನಿರ್ದೇಶಕರನ್ನು ಅವರು ನೋಡಿಕೊಳ್ಳುತ್ತಿದ್ದ ರೀತಿಯನ್ನು ನೋಡಿ ನಾನು ಆಶ್ಚರ್ಯಚಕಿತಳಾಗಿದ್ದೇನೆ; ಬೇರೆ ಯಾವ ನಟನೂ ಹೀಗೆ ಮಾಡುವುದನ್ನು ನಾನು ನೋಡಿಲ್ಲ. ಒಬ್ಬ ನಟನಾಗಿ, ನಿರ್ಮಾಪಕರಾಗಿ ಮತ್ತು ಮನುಷ್ಯನಾಗಿ ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ."

ನಯನತಾರಾ ಅವರು ಇನ್ನೂ ಹೀಗೆ ಹೇಳಿದರು, "ನಾನು ರಾಧಿಕಾ ಅವರ ಬಗ್ಗೆಯೂ ಪ್ರಸ್ತಾಪಿಸಲು ಬಯಸುತ್ತೇನೆ. ಎಲ್ಲರೂ ಚಿತ್ರದ ನಟರು ಮತ್ತು ತಾಂತ್ರಿಕ ಸಿಬ್ಬಂದಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಕುಟುಂಬದ ತ್ಯಾಗದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವರು ಯಶ್ ಅವರ ಅತಿದೊಡ್ಡ ಶಕ್ತಿಯಾಗಿದ್ದಾರೆ."

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಯಶ್ ಯಾವತ್ತೂ ಕನ್ನಡಿಗರು ತಲೆ ತಗ್ಗಿಸುವ ಕೆಲಸ ಮಾಡಲ್ಲ: ಟಾಕ್ಸಿಕ್ ಟ್ರೈಲರ್ ನಲ್ಲಿ ಯಶ್ ಪ್ರಾಮಿಸ್ Video