Webdunia - Bharat's app for daily news and videos

Install App

ನನ್ನ ತಂದೆಯನ್ನು ಬೆಂಬಲಿಸಿದೇ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್: ದರ್ಶನ್ ಪುತ್ರ ವಿನೀಶ್ ಬೇಸರ

Krishnaveni K
ಶುಕ್ರವಾರ, 14 ಜೂನ್ 2024 (09:59 IST)
ಬೆಂಗಳೂರು: ತಂದೆ ದರ್ಶನ್ ಹಲ್ಲೆ ಮತ್ತು ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆದ ಬಳಿಕ ದರ್ಶನ್ ಪುತ್ರ ವಿನೀಶ್ ದರ್ಶನ್ ಇದೇ ಮೊದಲ ಬಾರಿಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಬರೆದಿದ್ದು, ನನ್ನ ತಂದೆಯನ್ನು ಬೆಂಬಲಿಸಿದೇ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದು ಬೇಸರ ಹೊರಹಾಕಿದ್ದಾರೆ.

ವಿನೀಶ್ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ತಮ್ಮ ಫೋಟೋಗಳನ್ನು ಹಾಕಿಕೊಳ್ಳುವುದಲ್ಲದೆ ಬೇರೇನೂ ಪೋಸ್ಟ್ ಮಾಢುತ್ತಿರಲಿಲ್ಲ. ಇದೀಗ ತಂದೆ ಕಂಬಿ ಹಿಂದೆ ಹೋದ ಮೇಲೆ ವಿನೀಶ್ ಮೊದಲ ಬಾರಿಗೆ ಸಂದೇಶ ಬರೆದಿದ್ದಾರೆ. ತಮ್ಮ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಬೈಗುಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ನನ್ನ ತಂದೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ, ಬೈಗುಳಕ್ಕೆ ಮತ್ತು ನಾನು 15 ವರ್ಷದ ಬಾಲಕ ನನಗೂ ಭಾವನೆಗಳಿವೆ ಎಂಬುದನ್ನೂ ಅರ್ಥ ಮಾಡದೇ ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು. ಈ ಕಷ್ಟದ ಸಮಯದಲ್ಲಿ ನನ್ನ ತಂದೆ ಮತ್ತು ತಾಯಿಗೆ ಸ್ವಲ್ಪ ಬೆಂಬಲ ಬೇಕಿತ್ತು, ನನಗೆ ಶಾಪ ಹಾಕುವುದರಿಂದ ಏನೂ ಬದಲಾಗದು’ ಎಂದು ವಿನೀಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ನೆಟ್ಟಿಗರೂ ಕೂಡಾ ತೀವ್ರವಾಗಿ ಕಾಮೆಂಟ್ ಮಾಡಿದ್ದಕ್ಕೆ ಬೆಂಬಲಿಸುವುದಕ್ಕೆ ನಿನ್ನ ತಂದೆ ಏನೂ ಸಾಧನೆ ಮಾಡಿ ಜೈಲಿಗೆ ಹೋಗಿಲ್ಲ. ಒಬ್ಬರ ಜೀವ ತೆಗೆದು ಕಂಬಿ ಎಣಿಸುತ್ತಿದ್ದಾರೆ. ನಾಳೆ ರೇಣುಕಾಸ್ವಾಮಿಯ ಮಗು ಭೂಮಿಗೆ ಬಂದು ನನ್ನ ತಂದೆ ಎಲ್ಲಿ ಎಂದು ಕೇಳಿದರೆ ಅವರು ಏನು ಹೇಳಬೇಕು ಎಂದು ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುಜರಾತ್‌ನಿಂದ ಎಮ್ಮೆ ಖರೀದಿಸಲು ಹೋಗಿ ಟೋಪಿ ಹಾಕಿಕೊಂಡ ನಿರ್ದೇಶಕ ಜೋಗಿ ಪ್ರೇಮ್

ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೂಲಿ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ಮುಂದಿನ ಸುದ್ದಿ
Show comments