Webdunia - Bharat's app for daily news and videos

Install App

ಸ್ಯಾಂಡಲ್ ವುಡ್ ನಲ್ಲಿ ಇಂದು ಮೂರು ಸಿನಿಮಾಗಳು ಒಟ್ಟಿಗೇ ಬಿಡುಗಡೆ

Krishnaveni K
ಶುಕ್ರವಾರ, 14 ಜೂನ್ 2024 (08:38 IST)
ಬೆಂಗಳೂರು: ಬಹಳ ದಿನಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಒಂದೇ ದಿನ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದೂ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ವಿಶೇಷ. ಇಂದು ಬಿಡುಗಡೆಯಾಗುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಡೀಟೈಲ್ಸ್.

ಕನ್ನಡ ಚಿತ್ರರಂಗಕ್ಕೆ ಪೋಷಕ ನಟನಾಗಿ ಎಂಟ್ರಿ ಕೊಟ್ಟು ಇದೀಗ ನಾಯಕನಾಗಿ ತನ್ನದೇ ಆದ ಅಭಿಮಾನಿ ಬಳಗದವರನ್ನು ಸೃಷ್ಟಿಸಿಕೊಂಡಿರುವ ಡಾಲಿ ಧನಂಜಯ್ ನಾಯಕರಾಗಿರುವ ಕೋಟಿ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ನಿರ್ದೇಶಿಸಿರುವುದು ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಪರಮೇಶ್ವರ್ ಗುಂಡ್ಕಲ್. ಈ ಸಿನಿಮಾದಲ್ಲಿ ಒಬ್ಬ ಮಧ್ಯಮ ವರ್ಗದ ಹುಡುಗನ ಕತೆಯಿದೆ. ಕೋಟಿ ಸಿಕ್ಕರೆ ಒಬ್ಬ ವ್ಯಕ್ತಿ ಏನೆಲ್ಲಾ ಮಾಡಬಹುದು ಎಂದು ಹೇಳಲಾಗಿದೆ.

ಇಂದು ಬಿಡುಗಡೆಯಾಗುತ್ತಿರುವ ಇನ್ನೊಂದು ಸಿನಿಮಾ ವಸಿಷ್ಠ ಸಿಂಹ ಅವರ ‘ಲವ್ ಲಿ’. ಆ ಮೂಲಕ ಗೆಳೆಯ ಡಾಲಿ ಧನಂಜಯ್ ಗೆ ವಸಿಷ್ಠ ಥಿಯೇಟರ್ ನಲ್ಲಿ ಪೈಪೋಟಿ ನೀಡಲಿದ್ದಾರೆ. ಲವ್ ಲಿ ಸಿನಿಮಾದ ಕತೆ ನೈಜ ಘಟನೆಯಿಂದ ಪ್ರೇರಿತವಾಗಿದ್ದು. ಈ ಸಿನಿಮಾದ ಟೈಟಲ್ ಪ್ರೇಮಕತೆ ಹೇಳುತ್ತಿದೆಯಾದರೂ ಪೋಸ್ಟರ್ ನಲ್ಲಿ ಆಂಗ್ರಿ ಯಂಗ್ ಮ್ಯಾನ್, ಮಾಸ್ ಲುಕ್ ನಿಂದ ವಸಿಷ್ಠ ಗಮನ ಸೆಳೆಯುತ್ತಿದ್ದಾರೆ.

ಇಂದು ಬಿಡುಗಡೆಯಾಗುತ್ತಿರುವ ಮತ್ತೊಂದು ಸಿನಿಮಾ ಅನಿರುದ್ಧ್ ಜತ್ಕಾರ್ ನಾಯಕರಾಗಿರುವ ‘ಶೆಫ್ ಚಿದಂಬರ’. ಸಿನಿಮಾಗಳಲ್ಲಿ ಹೆಚ್ಚು ಯಶಸ್ಸು ಸಿಗದೇ ಕಿರುತೆರೆಗೆ ಹೋಗಿ ಅಲ್ಲಿ ಭರ್ಜರಿ ಯಶಸ್ಸು ಪಡೆದಿದ್ದ ಅನಿರುದ್ಧ ಕಿರುತೆರೆಯಲ್ಲಿ ಸಾಕಷ್ಟು ವಿವಾದಗಳ ಬಳಿಕ ಈಗ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಚೆಫ್ ಚಿದಂಬರ ಒಂದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಕತೆ ಹೊಂದಿದ್ದು ಈ ಸಿನಿಮಾದಲ್ಲಿ ಅನಿರುದ್ಧ್ ಜೊತೆಗೆ ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್ ಅಭಿನಯಿಸಿದ್ದಾರೆ. ಎಂ ಆನಂದ್ ರಾಜ್ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಮುಂದಿನ ಸುದ್ದಿ
Show comments