ಬೆಂಗಳೂರು: ಡಾ. ರಾಜ್ ಕುಟುಂಬದ ಕುಡಿ ರಾಘವೇಂದ್ರ ರಾಜ್ ಕುಮಾರ್ ಪುತ್ರ, ನಾಯಕ ನಟ ವಿನಯ್ ರಾಜ್ ಕುಮಾರ್ ಇದೀಗ ಕಿರುತೆರೆಯಲ್ಲಿ ಅಭಿನಯಿಸಲಿದ್ದಾರೆ.
									
										
								
																	
ರಾಜ್ ಕುಟುಂಬದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಈಗಾಗಲೇ ಕಿರುತೆರೆಯಲ್ಲಿ ನಿರೂಪಕರಾಗಿ, ಧಾರವಾಹಿ ನಿರ್ಮಾಣ ಮಾಡುವ ಮೂಲಕ ಛಾಪು ಮೂಡಿಸಿದ್ದರು. ಆದರೆ ಯಾರೂ ಬಣ್ಣ ಹಚ್ಚಿರಲಿಲ್ಲ.
									
			
			 
 			
 
 			
					
			        							
								
																	ಆದರೆ ಈಗ ರಾಜ್  ಮೊಮ್ಮಗ ವಿನಯ್ ರಾಜ್ ಕುಮಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಮರಳಿ ಬಂದಳು ಸೀತೆ’ ಎನ್ನುವ ಧಾರವಾಹಿಯೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
									
										
								
																	ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ ಈ ಧಾರವಾಹಿ ಮೂಡಿಬರುತ್ತಿದ್ದು, ಇಂದಿನಿಂದ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಬಹಳ ವರ್ಷಗಳ ನಂತರ ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣಕ್ಕಿಳಿದಿದ್ದು, ಸ್ವತಃ ರಾಘವೇಂದ್ರ ರಾಜ್ ಕುಮಾರ್ ಈ ಧಾರವಾಹಿಯನ್ನು ನಿರ್ಮಿಸುತ್ತಿದ್ದಾರೆ.
									
											
							                     
							
							
			        							
								
																	ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ತೇಜಸ್,  ಮಧುಬಾಲಾ, ರಕ್ಷಿತಾ, ಅಪೇಕ್ಷಾ, ಅಶ್ವಿನಿ ಗೌಡ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.
									
										
										
								
																	ಅಷ್ಟಕ್ಕೂ ವಿನಯ್ ಧಾರವಾಹಿಯಲ್ಲಿ ಪಾತ್ರ ಮಾಡುತ್ತಿರುವುದು ಅಮ್ಮನಿಗಾಗಿ ಅಂತೆ. ತಮ್ಮ ಅಮ್ಮನಿಗೆ ಧಾರವಾಹಿಯಲ್ಲಿ ನಾನು ಅಭಿನಯಿಸಬೇಕು ಎಂದು ಆಸೆಯಿತ್ತು. ಅದನ್ನು ಈ ಮೂಲಕ ನೆರವೇರಿಸುತ್ತಿದ್ದೇನೆ ಎಂದು ವಿನಯ್ ಹೇಳಿಕೊಂಡಿದ್ದಾರೆ.
									
			                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ