ದರ್ಶನ್ ಗೆ ನಾನೊಬ್ಬಳೇ ಪತ್ನಿ: ಸಿಡಿದೆದ್ದ ವಿಜಯಲಕ್ಷ್ಮಿ

Krishnaveni K
ಗುರುವಾರ, 4 ಜುಲೈ 2024 (10:59 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈಗ ಪವಿತ್ರಾ ಗೌಡರನ್ನು ಎರಡನೇ ಪತ್ನಿ ಎಂದ ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಹಂಚಿಕೊಳ್ಳುವಾಗ ಕಮಿಷನರ್ ದಯಾನಂದ್ ಪವಿತ್ರಾ ಗೌಡ ದರ್ಶನ್ ಪತ್ನಿ ಎಂದಿದ್ದರು. ಅದನ್ನು ಆಧಾರವಾಗಿಟ್ಟುಕೊಂಡು ಹಲವರು ಪವಿತ್ರಾ ಗೌಡ ಎರಡನೇ ಪತ್ನಿ ಎನ್ನುತ್ತಲೇ ಇದ್ದರು. ಎರಡನೇ ಪತ್ನಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ದರ್ಶನ್ ಸಂಗಡಿಗರ ಜೊತೆ ಸೇರಿಕೊಂಡು ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲಾಗಿತ್ತು ಎನ್ನಲಾಗಿತ್ತು.

ಇದರ ಬಗ್ಗೆ ಈಗ ವಿಜಯಲಕ್ಷ್ಮಿ ತಿರುಗಿಬಿದ್ದಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಜಯಲಕ್ಷ್ಮಿ ‘2003 ರಲ್ಲಿ ನಾನು ಮತ್ತು ದರ್ಶನ್ ಮದುವೆಯಾಗಿದ್ದು, ನಾನು ದರ್ಶನ್ ಅವರ ಏಕೈಕ ಪತ್ನಿಯಾಗಿದ್ದೇನೆ. ನೀವು ಪವಿತ್ರಾ ಗೌಡರನ್ನು ದರ್ಶನ್ ಅವರ ಎರಡನೇ ಪತ್ನಿ ಎಂದು ಹೇಳಿದ್ದೀರಿ. ಆದರೆ ಪವಿತ್ರಾ ಪತ್ನಿಯಲ್ಲ, ದರ್ಶನ್ ಸ್ನೇಹಿತೆಯಷ್ಟೇ. ಪವಿತ್ರಾ ಈಗಾಗಲೇ ಸಂಜಯ್ ಸಿಂಗ್ ಎಂಬವರನ್ನು ಮದುವೆಯಾಗಿ ಓರ್ವ ಪುತ್ರಿಯಿದ್ದಾಳೆ. ನಿಮ್ಮ ಹೇಳಿಕೆಯಿಂದ ನನಗೆ ಬೇಸರವಾಗಿದೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಿ’ ಎಂದು ವಿಜಯಲಕ್ಷ್ಮಿ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ.

ದರ್ಶನ್ ಮತ್ತು ಪವಿತ್ರಾ ಸಂಬಂಧ ಸ್ನೇಹಕ್ಕೂ ಮೀರಿದ್ದು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ವಿಜಯಲಕ್ಷ್ಮಿ ಮತ್ತು ಪವಿತ್ರಾ ನಡುವೆ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲೂ ವಾರ್ ಗಳು ನಡೆದಿದ್ದವು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಏನೇನು ತಪ್ಪು ಮಾಡಿದ್ದಾರೆ: ನಾಳೆ ದಾಸನಿಗೆ ಮಹತ್ವದ ದಿನ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಮುಂದಿನ ಸುದ್ದಿ
Show comments