Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿಜಯ್ ದಾಖಲೆ ಮುರಿದ ರಾಜಮೌಳಿ ಆರ್ ಆರ್ ಆರ್ ಸಿನಿಮಾ

webdunia
ಶನಿವಾರ, 17 ಅಕ್ಟೋಬರ್ 2020 (10:54 IST)
ಹೈದರಾಬಾದ್ : ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಚ್ಚು ಮಾರಾಟವಾಗುವ ಚಿತ್ರವೆಂದರೆ ಅದು ನಟ ವಿಜಯ್ ಅವರ ಚಿತ್ರ. ವಿಜಯ್ ಚಿತ್ರ ವಿಶ್ವದಾದ್ಯಂತ 200ಕೋಟಿ ರೂ.ಗೆ ಮಾರಾಟವಾಗುತ್ತಿತ್ತಂತೆ. ಆದರೆ ನಿರ್ದೇಶಕ ರಾಜಮೌಳಿ ಆರ್ ಆರ್ ಆರ್ ಸಿನಿಮಾದ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ ಎನ್ನಲಾಗಿದೆ.

ಹೌದು. ಭಾಗವತಿಯ ನಂತರ ರಾಜಮೌಳಿ ತೆಲುಗು ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಅವರ ಜೊತೆ ಸೇರಿ ಆರ್ ಆರ್ ಆರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಅರ್ಧದಷ್ಟು ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಆದರೆ ಈ ನಡುವೆ ಹಾಟ್ ಸ್ಟಾರ್ ಮತ್ತು ಸ್ಟಾರ್ ಟಿವಿ ಈ ಚಿತ್ರದ ಡಿಜಿಟಲ್ ಹಕ್ಕನ್ನು ಖರೀದಿಸಲು ಮುಂದಾಗಿದ್ದು, ಒಟ್ಟು 200ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರಂತೆ. ಆ ಮೂಲಕ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ವಿಜಯ್ ದಾಖಲೆ ಮುರಿದಿದೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಲಕ್ಷ್ಮಿ ಬಾಂಬ್ ನೋಡಿದ ಬಾಲಿವುಡ್ ನಟ ಖುಷ್