Webdunia - Bharat's app for daily news and videos

Install App

ಲವ್ ರೂಮರ್ಸ್ ಮಧ್ಯೆಯೇ ರಶ್ಮಿಕಾರನ್ನು ಗರ್ಲ್‌ಫ್ರೆಂಡ್‌ ಆಗಿ ಪರಿಚಯಿಸಿದ ವಿಜಯ್ ದೇವರಕೊಂಡ

Sampriya
ಭಾನುವಾರ, 8 ಡಿಸೆಂಬರ್ 2024 (19:46 IST)
Photo Courtesy X
ನಟಿ ರಶ್ಚಿಕಾ ಮಂದಣ್ಣ ಅವರು ಈಚೆಗೆ ವಿಜಯ್ ದೇವರಕೊಂಡ ಜತೆಗಿನ ಪ್ರೀತಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಈ ವದಂತಿಗಳ ನಡುವೆಯೇ ನಟ ವಿಜಯ್ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದ್ದಾರೆ. ದಿ ಗರ್ಲ್‌ ಫ್ರೆಂಡ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ.

ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಮಹಿಳಾ ಕೇಂದ್ರಿತ ಸಿನಿಮಾಗಳ ಮೇಲೆ ಕೇಂದ್ರಿಕರಿಸಿದ್ದಾರೆ. ಈ ಸಿನಿಮಾಗೆ ನಟ, ನಿರ್ದೇಶಕ ರಾಹುಲ್ ರವೀಂದ್ರನ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ರಶ್ಮಿಕಾ ಅವರ ಆಪ್ತ ಸ್ನೇಹಿತ ಮತ್ತು ಸಹನಟ ವಿಜಯ್ ದೇವರಕೊಂಡ ಇಂದು ದಿ ಗರ್ಲ್‌ಫ್ರೆಂಡ್ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.   GA2 ಪಿಕ್ಚರ್ಸ್, ಮಾಸ್ ಮೂವಿ ಮೇಕರ್ಸ್, ಧೀರಜ್ ಮೊಗಿಲಿನೇನಿ ಎಂಟರ್ಟೈನ್ಮೆಂಟ್ ಅವರು ದಿ ಗರ್ಲ್‌ಫ್ರೆಂಡ್‌ಗೆ ಬಂಡವಾಳ ಹೂಡಲಿದ್ದಾರೆ.

ಪುಷ್ಪ 2: ದಿ ರೂಲ್‌ನ ಯಶಸ್ಸಿನ ಮೇಲೆ ರಶ್ಮಿಕಾ ಮಂದಣ್ಣ ಸವಾರಿ ಮಾಡುತ್ತಿದ್ದಾರೆ ಮತ್ತು ಚಿತ್ರದಲ್ಲಿನ ಅವರ ಅಭಿನಯವು ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ.

ವಿಜಯ್ ದೇವರಕೊಂಡ ಅವರ ಮುಂದಿನ ಚಿತ್ರಕ್ಕೆ ರಶ್ಮಿಕಾ ಸಹಿ ಹಾಕಿದ್ದಾರೆ ಮತ್ತು ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ನಂತರ ಇದು ಅವರ ಮೂರನೇ ಚಿತ್ರವಾಗಿದೆ. ರಾಹುಲ್ ಸಂಕೃತ್ಯನ್ ನಿರ್ದೇಶಕರಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರಾಗಿದ್ದಾರೆ



ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments