ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತೆ, ಬಹುಭಾಷಾ ಗಾಯಕಿ ವಾಣಿ ಜಯರಾಂ ತಮ್ಮ ಚೆನ್ನೈ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಾಣಿ ಜಯರಾಂ ಅವರಿಗೆ 77 ವರ್ಷ ವಯಸ್ಸಾಗಿತ್ತು. ಚೆನ್ನೈನ ನಿವಾಸದಲ್ಲಿ ಅವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರ ಪತಿ ಈ ಮೊದಲೇ ತೀರಿಕೊಂಡಿದ್ದಾರೆ.
ಎಂದಿನಂತೆ ಮನೆಗೆಲಸದಾಕೆ ಕಾಲಿಂಗ್ ಬೆಲ್ ಒತ್ತಿದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡ ಆಕೆ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಪರಿಶೀಲಿಸಿದಾಗ ವಾಣಿ ಜಯರಾಂ ಅವರ ಮೃತದೇಹ ಪತ್ತೆಯಾಗಿದೆ. ವಾಣಿ ಜಯರಾಂ ಅವರಿಗೆ ಮಕ್ಕಳಿಲ್ಲ. ಇದೀಗ ಅವರ ಮುಂದಿನ ಕಾರ್ಯದ ಬಗ್ಗೆ ಮಾಹಿತಿ ಬಂದಿಲ್ಲ.