Publish Date: Mon, 14 Feb 2022 (10:39 IST)
Updated Date: Mon, 14 Feb 2022 (10:41 IST)
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ಅಸ್ವಸ್ಥರಾಗಿದ್ದ ರಾಜೇಶ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಿಗ್ಗೆ ವೇಳೆಗೆ ಅವರ ಸ್ಥಿತಿ ಕೊಂಚ ಸುಧಾರಿಸಿದೆಯಾದರೂ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ ಎನ್ನಲಾಗಿದೆ.
ಇದೀಗ ಅವರ ಆರೋಗ್ಯ ಸುಧಾರಣೆಗೆ ವೈದ್ಯರು ಶ್ರಮಿಸುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಅಧಿಕೃತ ಮಾಹಿತಿ ನೀಡುವ ಸಾಧ್ಯತೆಯಿದೆ. 86 ವರ್ಷ ವಯಸ್ಸಿನ ಹಿರಿಯ ನಟ ಚಿತ್ರರಂಗದಲ್ಲಿ ನಾಯಕ ನಟ, ಪೋಷಕ ನಟನಾಗಿ ತಮ್ಮದೇ ಛಾಪು ಮೂಡಿಸಿದ್ದರು.