Select Your Language

Notifications

webdunia
webdunia
webdunia
Monday, 7 April 2025
webdunia

150ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಹಿರಿಯ ನಟ ಮೋಹನ್ ರಾಜ್ ಇನ್ನಿಲ್ಲ

Veteran actor Mohan Raj

Sampriya

ಕೇರಳ , ಶನಿವಾರ, 5 ಅಕ್ಟೋಬರ್ 2024 (13:59 IST)
Photo Courtesy X
ಕೇರಳ: ಮಲಯಾಳಂನ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟ ಮೋಹನ್ ರಾಜ್ (69) ನಿಧನವಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಿರುವನಂತಪುರಂ ಬಳಿಯ ಕಂಜಿರಾಂಕುಳಂನ ತಮ್ಮ ಮನೆಯಲ್ಲಿ ವಿಧಿವಶರಾದರು.

1988ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದ ಮೋಹನ್ ರಾಜ್ ಅವರು 1989ರಲ್ಲಿ ತೆರೆ ಕಂಡಿದ್ದ ಮೋಹನ್ ಲಾಲ್ ಅಭಿನಯದ ಕಿರೀಡಂ ಮಲಯಾಳಂ ಸಿನಿಮಾದಲ್ಲಿ ಕಿರಿಕಾದನ್ ಜೋಸ್ ಹೆಸರಿನ ಖಳನಟನಾಗಿ ಮಿಂಚಿದ್ದರು.

ಕಿರೀಡಂ ಸಿನಿಮಾ ಕನ್ನಡದಲ್ಲಿ ಮೋಡದ ಮರೆಯಲ್ಲಿ ಎಂಬ ಹೆಸರಿನಿಂದ ರಿಮೇಕ್ ಆಗಿ 1991 ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಯಮುನಾ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಜೀವ ನೀನು, ದೇಹ ನಾನು ಚಿತ್ರಗೀತೆ ಸಾಕಷ್ಟು ಜನಪ್ರಿಯವಾಗಿದೆ.

ಮೋಹನ್ ರಾಜ್ ಅವರ ನಿಧನಕ್ಕೆ ಸಿ.ಎಂ ಪಿಣರಾಯಿ ವಿಜಯನ್, ನಟರಾದ ಮೋಹನ್ ಲಾಲ್, ಮುಮ್ಮುಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಲಯಾಳಂ ಸೇರಿದಂತೆ ತೆಲುಗು, ತಮಿಳಿನ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋಹನ್ ರಾಜ್ ನಟಿಸಿದ್ದರು. ಖಳನಟರಾಗಿ ಅವರು ಹೆಚ್ಚು ಗುರುತಿಸಿಕೊಂಡಿದ್ದರು.

1955ರಲ್ಲಿ ತಿರುವನಂತಪುರದಲ್ಲಿ ಜನಿಸಿದ್ದ ಮೋಹನ್ ರಾಜ್ ಭಾರತೀಯ ಸೇನೆ ಸೇರಿದ್ದರು. ಗಾಯದಿಂದ ಕೆಲ ವರ್ಷಗಳ ಬಳಿಕ ಸೇನೆ ತೊರೆದು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿಕೊಂಡು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

BBK11: ಹುಡುಗಿಯರ ಒಳಉಡುಪಿನ ಬಗ್ಗೆ ಕಾಮೆಂಟ್ ಮಾಡಿದ ಲಾಯರ್ ಜಗದೀಶ್