Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ಪವನ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ ವಕೀಲ್ ಸಾಬ್ ಚಿತ್ರತಂಡ

ಹೊಸ ವರ್ಷಕ್ಕೆ ಪವನ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ ವಕೀಲ್ ಸಾಬ್ ಚಿತ್ರತಂಡ
ಹೈದರಾಬಾದ್ , ಶನಿವಾರ, 2 ಜನವರಿ 2021 (11:12 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ನಟನೆಯ  ವಕೀಲ್ ಸಾಬ್ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಶ್ರೀರಾಮ್ ವೇಣು ನಿರ್ದೇಶನ ಮಾಡುತ್ತಿದ್ದು, ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರತಂಡ ಹೊಸ ವರ್ಷದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಉಡುಗೊರೆಯನ್ನು ಘೋಷಿಸಿದೆ. ಅದೇನೆಂದರೆ  ಅಭಿಮಾನಿಗಳಿಗೆ ಹೊಸ ವರ್ಷದ ಸಂಭ್ರಮ ಹೆಚ್ಚಿಸಲು ವಕೀಲ್ ಸಾಬ್ ಚಿತ್ರದ ವಾಲ್ ಪೇಪರ್ ಬಿಡುಗಡೆ ಮಾಡಿದ್ದು, ಸದ್ಯದಲ್ಲಿ ಟೀಸರ್ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ನಾಯಕಿಯ ಜೊತೆ ಪವನ್ ಬೈಕ್ ರೈಡ್ ಮಾಡುತ್ತಿರುವ ಪೋಟೊ ಬಿಡುಗಡೆಯಾಗಿದೆ. ಇದನ್ನು  ಅಭಿಮಾನಿಗಳು ವೈರಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರಂತೆ ಸಿಂಬು -ನಯನತಾರಾ ಜೋಡಿ