Publish Date: Sat, 04 Jan 2020 (08:57 IST)
Updated Date: Sat, 04 Jan 2020 (08:59 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ತೆಲುಗು ಮುಹೂರ್ತ ಮತ್ತು ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಲಿದೆ.
ಈಗಾಗಲೇ ಕನ್ನಡದಲ್ಲಿ ಅದ್ಧೂರಿಯಾಗಿ ಮುಹೂರ್ತ ಮುಗಿಸಿರುವ ಚಿತ್ರತಂಡ ಇಂದು ತೆಲುಗಿ ಅವತರಣಿಕೆಯ ಪೋಸ್ಟರ್ ಜತೆಗೆ ಮುಹೂರ್ತ ಕಾರ್ಯಕ್ರಮವನ್ನು ಹೈದರಾಬಾದ್ ನಲ್ಲಿ ನಡೆಸಲಿದೆ. ತೆಲುಗಿನಲ್ಲೂ ಉಪೇಂದ್ರ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಅಲ್ಲಿ ವಿಶೇಷವಾಗಿ ಮುಹೂರ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆರ್ ಆರ್ ಆರ್ ಸಿನಿಮಾ ನಿರ್ಮಾಪಕರಾದ ಡಿವಿವಿ ದಾನಯ್ಯ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಆರ್ ಚಂದ್ರು ನಿರ್ದೇಶನದ ಸಿನಿಮಾದ ಚಿತ್ರೀಕರಣ ಇದೇ ತಿಂಗಳು ಆರಂಭವಾಗಲಿದೆ.