Select Your Language

Notifications

webdunia
webdunia
webdunia
Wednesday, 9 April 2025
webdunia

ನನಗೆ ಯಾರೂ ದೇಣಿಗೆ ಕೊಡಬೇಡಿ: ಉಪೇಂದ್ರ ಮನವಿ

ಉಪೇಂದ್ರ
ಬೆಂಗಳೂರು , ಶನಿವಾರ, 5 ಜೂನ್ 2021 (09:19 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಉಪ್ಪಿ ಫೌಂಡೇಷನ್ ಮೂಲಕ ಎಷ್ಟೋ ಜನರಿಗೆ ನೆರವಾಗಿದ್ದಾರೆ. ಅವರ ಕೆಲಸಕ್ಕೆ ಅನೇಕ ದಾನಿಗಳು ಕೈ ಜೋಡಿಸಿದ್ದರು.


ಚಿತ್ರರಂಗದ ಸೆಲೆಬ್ರಿಟಿಗಳು ತಾವಾಗೇ ಧನ ಸಹಾಯ ಮಾಡಿದ್ದರೆ, ಹಲವು ರೈತರೂ ತಾವು ಬೆಳೆದ ಬೆಳೆಯನ್ನು ಉಚಿತವಾಗಿ ಬಡವರಿಗೆ ಹಂಚಲು ನೀಡಿದ್ದೂ ಇದೆ. ಆದರೆ ಈಗ ಉಪೇಂದ್ರ ಉಪ್ಪಿ ಫೌಂಡೇಷನ್ ಗೆ ಯಾರೂ ದೇಣಿಗೆ ಕೊಡಬೇಡಿ. ನಾನು ಯಾವುದೇ ದೇಣಿಗೆ ಸ್ವೀಕರಿಸಲ್ಲ ಎಂದಿದ್ದಾರೆ.

ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಇನ್ನು ಮುಂದೆ ತಮಗೆ ಯಾರಿಗಾದರೂ ಸಹಾಯ ಮಾಡಬೇಕೆಂದಿದ್ದರೆ ನೇರವಾಗಿ ನೀವೇ ಮಾಡಿ. ನಮ್ಮ ಫೌಂಡೇಷನ್ ಗೆ ದೇಣಿಗೆ ಕೊಡಬೇಡಿ. ಯಾವುದೇ ಹಣ, ಕೊಡುಗೆಗಳನ್ನು ಸ್ವೀಕರಿಸುವುದನ್ನು ನಾವು ನಿಲ್ಲಿಸುತ್ತಿದ್ದೇವೆ. ಇದುವರೆಗೆ ಉಪ್ಪಿ ಫೌಂಡೇಷನ್ ಗೆ ಹರಿದುಬಂದ ಹಣ, ಖರ್ಚಿನ ವಿವರಗಳನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ’ ಎಂದು ಉಪೇಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಪಕ್ಕದಲ್ಲಿ ಹಿರಿಯ ನಟಿ ಜಯಮ್ಮ ಮೃತದೇಹ: ಕುಟುಂಬಸ್ಥರ ಸ್ಪಷ್ಟನೆ