Publish Date: Mon, 09 Jan 2017 (08:47 IST)
Updated Date: Mon, 09 Jan 2017 (08:51 IST)
ಬರೋಬ್ಬರಿ 17 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮಾ ಮತ್ತೆ ಜೊತೆಯಾಗಿ ಅಭಿನಯಿಸಿರುವ ಚಿತ್ರ ’ಉಪೇಂದ್ರ ಮತ್ತೆ ಬಾ’. ಇದೀಗ ಈ ಚಿತ್ರ ಬಹುತೇಕ ರೆಡಿಯಾಗಿದ್ದು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಉಪ್ಪಿ ಮತ್ತು ಪ್ರೇಮಾ ಅಭಿನಯದ ’ಉಪೇಂದ್ರ’ (1999) ಬಳಿಕ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.
ತೆಲುಗಿನಲ್ಲಿ ಯಶಸ್ವಿಯಾದ ’ಸೋಗ್ಗಾಡೆ ಚಿನ್ನಿ ನಾಯನ’ ಚಿತ್ರದ ರೀಮೇಕ್ ಇದು. ಅಕ್ಕಿನೇನಿ ನಾಗಾರ್ಜುನ ಮತ್ತು ರಮ್ಯಾ ಕೃಷ್ಣ ಅಭಿನಯದ ಚಿತ್ರ. ಟಾಲಿವುಡ್‍ನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದಂತ ಸಿನಿಮಾ. ಸುಮಾರು ರೂ.20 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಚಿತ್ರ ಬಾಕ್ಸಾಫೀಸಲ್ಲಿ ರೂ.75 ಕೋಟಿ ಬಾಚಿತು.
ಡಬಲ್ ಶೇಡ್‌ನಲ್ಲಿರುವ ಪಾತ್ರ, ಕೌಟುಂಬಿಕ ಕಥಾ ಚೌಕಟ್ಟು, ಮೇಕಿಂಗ್ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಕನ್ನಡದಲ್ಲಿ ಇದೇ ಚಿತ್ರ ಈಗ ಸದ್ದುಗದ್ದಲವಿಲ್ಲದೆ ಅಂತಿಮ ಹಂತ ತಲುಪಿದೆ. ಚಿತ್ರದ ಕೆಲವೊಂದು ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಈಗ ಮಾತಿನ ಮರುಲೇಪನ ನಡೆಯುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಹಯಗ್ರೀವ ಎಂಟರ್‍ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಶ್ರೀ ಎಂ.ಎಸ್. ಶ್ರೀಕಾಂತ್, ಎಂ.ಎಸ್. ಶಶಿಕಾಂತ್ ನಿರ್ಮಿಸಿರುವ ಚಿತ್ರ. ಉಪೇಂದ್ರ ಸಂಭಾಷಣೆ, ಜೆ.ಸ್ವಾಮಿ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಶ್ರೀಧರ್.ವಿ ಸಂಭ್ರಮ್ ಸಂಗೀತ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ, ಜೋನಿ ಹರ್ಷ ಸಂಕಲನವಿದ್ದು ಚಿತ್ರವನ್ನು ಅರುಣ್ ಲೋಕನಾಥ್ ನಿರ್ದೇಶಿಸುತ್ತಿದ್ದಾರೆ.
ಚಿತ್ರದ ಪ್ರಮುಖ ತಾರಾಗಣದಲ್ಲಿ ಉಪೇಂದ್ರ, ಪ್ರೇಮಾ, ಶ್ರುತಿ ಹರಿಹರನ್, ಚಾಂದಿನಿ, ಹರ್ಷಿಕ ಪೊಣ್ಣಚ್ಚ, ಸಾಯಿಕುಮಾರ್, ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ವಸಿಷ್ಠಸಿಂಹ ಮುಂತಾದವರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.