Publish Date: Sun, 08 Jan 2017 (14:16 IST)
Updated Date: Sun, 08 Jan 2017 (14:19 IST)
ಕೋಲಿವುಡ್ ಬೆಡಗಿ ತ್ರಿಷಾ ಕೃಷ್ಣನ್ ಎರಡನೇ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ. ಹಸೆಮಣೆ ತನಕ ಬಂದಿದ್ದ ಮದುವೆ ಕೊನೆ ಕ್ಷಣದಲ್ಲಿ ರದ್ದಾದ ಮೇಲೆ ಈಗ ಸಿನಿಮಾಗಳ ಮೇಲೆ ಗಮನನೆಟ್ಟಿದ್ದಾರೆ ತ್ರಿಷಾ. ಮಹಿಳಾ ಪ್ರಧಾನ ಚಿತ್ರಗಳ ಜೊತೆಗೆ ಗ್ಲಾಮರ್ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ.
ಸದ್ಯಕ್ಕೆ ತಮಿಳು ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತಿರುವ ತ್ರಿಷಾ ಶೀಘ್ರದದಲ್ಲೇ ಸ್ಟಾರ್ ಹೀರೋ ಜೊತೆಗೂ ಅಭಿನಯಿಸಲಿದ್ದಾರಂತೆ. ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಸದಾ ಮುಂದಿರುವ ಟಾಲಿವುಡ್ ಹೀರೋ ನಾಗಾರ್ಜುನ ಜೊತೆ ತೆರೆಹಂಚಿಕೊಳ್ಳಲು ರೆಡಿಯಾಗಿದ್ದಾರೆ ತ್ರಿಷಾ.
ರಾಜುಗಾರಿ ಗದಿ 2 ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರಂತೆ ತ್ರಿಷಾ. ಓಂಕಾರ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಈ ಹಿಂದೆ ಕಿಂಗ್ ಎಂಬ ಚಿತ್ರದಲ್ಲಿ ತ್ರಿಷಾ ಅಭಿನಯಿಸಿದ್ದರು. ಈಗ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಈ ಜೋಡಿ ರೆಡಿಯಾಗಿದೆ. ಈ ಚಿತ್ರದಲ್ಲಿ ಸೀರತ್ ಕಪೂರ್ ಇನ್ನೊಬ್ಬ ನಾಯಕಿ ಎನ್ನುತ್ತಿವೆ ಮೂಲಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.