Publish Date: Mon, 17 May 2021 (08:59 IST)
Updated Date: Mon, 17 May 2021 (09:01 IST)
ಬೆಂಗಳೂರು: ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಬೆಳೆಗಳನ್ನು ಮಾರಲು ಸೂಕ್ತ ಮಾರುಕಟ್ಟೆ ಸಿಗದೇ ಕಷ್ಟಪಡುತ್ತಿರುವ ರೈತರ ಬೆಳೆಗಳನ್ನು ಕೊಂಡು ನೆರವು ನೀಡುತ್ತೇವೆ ಎಂದು ಘೋಷಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಮೊದಲ ದಿನವೇ ರೈತರೊಬ್ಬರು ಬೆಳೆದ ಟೊಮ್ಯಾಟೋಗಳನ್ನು ಖರೀದಿಸಿ ಅದನ್ನು ದಿನಸಿ ಕಿಟ್ ನಲ್ಲಿ ಸೇರಿಸಿ ಬಡವರಿಗೆ ಹಂಚಿದ್ದಾರೆ.
ಜೊತೆಗೆ ನಿಜವಾಗಿಯೂ ಸಂಕಷ್ಟದಲ್ಲಿರುವ ರೈತರು ಸಂಪರ್ಕಿಸಿ. ಯಾಕೆಂದರೆ ಇದು ಲಾಭಕ್ಕಾಗಿ ಮಾಡುತ್ತಿರುವ ವ್ಯಾಪಾರ ಅಲ್ಲ ಎಂದು ಉಪೇಂದ್ರ ಮನವಿಯನ್ನೂ ಮಾಡಿದ್ದಾರೆ. ಈಗಾಗಲೇ ಹಲವು ರೈತರು ಉಪೇಂದ್ರರನ್ನು ಸಂಪರ್ಕಿಸುವ ಯತ್ನದಲ್ಲಿದ್ದಾರೆ.