Publish Date: Sun, 16 May 2021 (08:52 IST)
Updated Date: Sun, 16 May 2021 (08:54 IST)
ಬೆಂಗಳೂರು: ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವವರಿಗೆ ರಿಯಲ್ ಸ್ಟಾರ್ ಉಪೇಂದ್ರ ತಮಗೆ ಬಂದ ದೇಣಿಗೆಗಳ ಸಹಾಯದಿಂದ ದಿನಸಿ ಕಿಟ್ ವಿತರಿಸುತ್ತಿದ್ದಾರೆ.
ಈ ನಡುವೆ ಉಪೇಂದ್ರ ರೈತರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಕೊರೋನಾ, ಲಾಕ್ ಡೌನ್ ನಿಂದಾಗಿ ಎಷ್ಟೋ ಮಂದಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ.
ಇಂತಹ ರೈತರ ಬೆಳೆಗಳನ್ನು ನಾವು ಖರೀದಿಸಿ ದಿನಸಿ ಕಿಟ್ ಗಳ ಜೊತೆ ನೀಡುತ್ತೇವೆ ಎಂದು ಉಪೇಂದ್ರ ಇತ್ತೀಚೆಗೆ ಹೇಳಿದ್ದರು. ಈಗ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ. ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡಲು ಮೊಬೈಲ್ ಸಂಖ್ಯೆಯೊಂದನ್ನು ನೀಡಿದ್ದು, ಬೆಳೆ ಮಾರಾಟ ಮಾಡಲಾಗದ ರೈತರು ಈ ಸಂಖ್ಯೆಗೆ ವ್ಯಾಟ್ಸಪ್ ಮಾಡಿ ತಮ್ಮ ಬೆಳೆ, ಅದರ ಬೆಲೆ ಇತರ ಮಾಹಿತಿ ನೀಡಬೇಕು. ಇದನ್ನು ಉಪೇಂದ್ರ ತಮ್ಮ ಸಮಾಜಮುಖೀ ಕಾರ್ಯಕ್ಕೆ ನೀಡಲು ಖರೀದಿ ಮಾಡಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.