Select Your Language

Notifications

webdunia
webdunia
webdunia
webdunia

ಚುನಾವಣೆ ಇಫೆಕ್ಟ್ ನಿಂದ ಐ ಲವ್ ಯೂ ಹೇಳಲಾಗದೇ ಒದ್ದಾಡುತ್ತಿರುವ ಉಪೇಂದ್ರ!

ಚುನಾವಣೆ ಇಫೆಕ್ಟ್ ನಿಂದ ಐ ಲವ್ ಯೂ ಹೇಳಲಾಗದೇ ಒದ್ದಾಡುತ್ತಿರುವ ಉಪೇಂದ್ರ!
ಬೆಂಗಳೂರು , ಬುಧವಾರ, 3 ಏಪ್ರಿಲ್ 2019 (09:36 IST)
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಿಯಲ್ ಸ್ಟಾರ್ ಅಭಿನಯದ ಐ ಲವ್ ಯೂ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಈ ಚುನಾವಣೆಯಲ್ಲಿ ಉಪೇಂದ್ರ ಪ್ರಜಾಕೀಯ ಪಕ್ಷ ಕೂಡಾ ಸ್ಪರ್ಧಾ ಕಣದಲ್ಲಿದೆ.


ತಾವೇ ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ತಮ್ಮ ಪಕ್ಷ ಚುನಾವಣೆಯ ಕಣದಲ್ಲಿರುವುದರಿಂದ ಉಪೇಂದ್ರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲು ಇಚ್ಛಿಸದ ಉಪೇಂದ್ರ ಇದಕ್ಕಾಗಿ ನಿರ್ದೇಶಕ ಆರ್ ಚಂದ್ರು ಬಳಿ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಲು ಮನವಿ ಮಾಡಿದ್ದಾರಂತೆ.

ಏಪ್ರಿಲ್ 12 ಅಥವಾ 19 ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಈ ಮೊದಲು ಸಿದ್ಧತೆ ನಡೆಸಿತ್ತು. ಅದೀಗ ಮುಂದಕ್ಕೆ ಹೋಗಿದೆ. ಹಾಗಿದ್ದರೂ ಏಪ್ರಿಲ್ ಅಂತ್ಯಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ.. ಇಷ್ಟು ಕಡೆ ಒಂದೇ ದಿನ ನಟ ದರ್ಶನ್ ರಿಂದ ಪ್ರಚಾರ!