ಯಾರೋ ಒಬ್ಬರಿಂದ ಇಂಡಸ್ಟ್ರಿ ನಡೀತಿಲ್ಲ: ದರ್ಶನ್ ಗೆ ಟಾಂಗ್ ಕೊಟ್ಟ ಉಮಾಪತಿ ಗೌಡ

Krishnaveni K
ಸೋಮವಾರ, 6 ಅಕ್ಟೋಬರ್ 2025 (15:51 IST)
Photo Credit: Instagram
ಬೆಂಗಳೂರು: ಚಿತ್ರರಂಗ ಯಾರೋ ಒಬ್ಬರಿಂದ ಅಲ್ಲ, ಒಬ್ಬರ ಸೊತ್ತಲ್ಲ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಇಂದು ನಟ ದರ್ಶನ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ದರ್ಶನ್ ಮತ್ತು ಉಮಾಪತಿ ಗೌಡ ನಡುವಿನ ವೈಮನಸ್ಯ ಎಲ್ಲರಿಗೂ ಗೊತ್ತಿರುವಂತದ್ದೇ. ದರ್ಶನ್ ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿದ್ದು ಉಮಾಪತಿ ಗೌಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿರುವ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಧ್ರುವ ಸರ್ಜಾ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ ಬಳಿಕ ಇಂದು ಮಾತನಾಡಿದ ಉಮಾಪತಿ ಶ್ರೀನಿವಾಸ್ ಗೌಡ ‘ಇಂಡಸ್ಟ್ರಿ ಯಾರೋ ಒಬ್ಬ ವ್ಯಕ್ತಿಯ ಅಥವಾ ಕುಟುಂಬದ ಸೊತ್ತಲ್ಲ. ಶ್ರದ್ಧೆ, ಶ್ರಮವಹಿಸಿ ಕೆಲಸ ಮಾಡಿದರೆ ಕಲಾ ಸರಸ್ವತಿ ಖಂಡಿತಾ ಕೈ ಹಿಡಿಯುತ್ತಾಳೆ. ಅದೇ ರೀತಿ ಇಂದು ನಾವು ಶ್ರದ್ಧೆಯಿಂದ ಕೆಲಸ ಮಾಡೋಣ’ ಎಂದು ಕರೆ ನೀಡಿದ್ದಾರೆ.

ದರ್ಶನ್ ಈ ಹಿಂದೆ ಉಮಾಪತಿ ಗೌಡರನ್ನು ತಗಡು ಎಂದು ಪರೋಕ್ಷವಾಗಿ ಬೈದಿದ್ದರು. ಇದಾದ ಮೇಲೆ ಇಬ್ಬರ ನಡುವೆ ವಾಗ್ಯುದ್ಧ ನಡೆಯುತ್ತಲೇ ಇರುತ್ತದೆ. ಇದೀಗ ಉಮಾಪತಿ ಗೌಡ ನೀಡಿರುವ ಹೇಳಿಕೆ ಕೂಡಾ ಪರೋಕ್ಷವಾಗಿ ದರ್ಶನ್ ಗೇ ಹೇಳಿದ್ದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹರೀಶ್ ರಾಯ್ ಅಂತಿಮ ದರ್ಶನಕ್ಕೆ ಬಂದು ಯಶ್ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್

ಅಳುತ್ತಿದ್ದ ಹರೀಶ್ ರಾಯ್‌ ಮಗನ ಕೈಹಿಡಿದು ಧೈರ್ಯ ತುಂಬಿದ ರಾಕಿಬಾಯ್ ಯಶ್‌

ಗರ್ಲ್‌ಫ್ರೆಂಡ್ ಜತೆಗಿನ ಬೆಚ್ಚಗಿನ ಫೋಟೊ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಹರೀಶ್ ರಾಯ್ ಇನ್ನಿಲ್ಲ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಮುಂದಿನ ಸುದ್ದಿ
Show comments