Select Your Language

Notifications

webdunia
webdunia
webdunia
webdunia

ಉದಯ್ ಕಿರಣ್ ಆತ್ಮಹತ್ಯೆಗೆ ಚಿರಂಜೀವಿ ಕಾರಣವಲ್ಲ: ನಟನ ಸಹೋದರ ಹೇಳಿದ್ದೇನು..?

ಉದಯ್ ಕಿರಣ್ ಆತ್ಮಹತ್ಯೆಗೆ ಚಿರಂಜೀವಿ ಕಾರಣವಲ್ಲ: ನಟನ ಸಹೋದರ ಹೇಳಿದ್ದೇನು..?
ಹೈದ್ರಾಬಾದ್ , ಸೋಮವಾರ, 10 ಜುಲೈ 2017 (14:04 IST)
ಟಾಲಿವುಡ್`ನ ಸ್ಫುರದ್ರೂಪಿ ನಟರ ಪೈಕಿ ಉದಯ್ ಕಿರಣ್ ಸಹ ಒಬ್ಬರು. ನುವ್ವು ನೇನು, ಔನನ್ನಾ ಕಾದನ್ನಾ, ಮನಸಂತಾ ನುವ್ವೆ ಹೀಗೆ ಸೂಪರ್ ಹಿಟ್ ಚಿಯ್ರಗಳನ್ನ ಕೊಟ್ಟ ನಟ 2014ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಚಿರಂಜೀವಿ ಕಾರಣ ೆಂಬ ವದಂತಿಗಳು ಹರಡಿದ್ದವು. ಆದರೆ, ಉದಯ್ ಕಿರಣ್ ಸಹೋದರಿ ಶ್ರೀದೇವಿ ಈ ಊಹಾಪೋಹಕ್ಕೆ ತೆರೆ ಎಳೆದಿದ್ಧಾರೆ.

ಪುತ್ರಿ ಸುಶ್ಮಿತಾ ಜೊತೆ ಮದುವೆಯಾಗಲು ನಿರಾಕರಿಸಿದ್ದರಿಂದ ಚಿರಂಜೀವಿ ಉದಯ್ ಕಿರಣ್`ಗೆ ಅವಕಾಶ ಸಿಗದಂತೆ ಮಾಡಿದ್ದರು. ಇದರಿಂದಲೇ ಮನನೊಂದ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡರು ಎಂದು ಸುದ್ದಿ ಹಬ್ಬಿತ್ತು. ಆದರೆ, ವರದಿಗಳನ್ನ ಶ್ರೀದೇವಿ ತಳ್ಳಿ ಹಾಕಿದ್ಧಾರೆ. ಚಿರಂಜೀವಿ ಯಾವಾಗಲೂ ನಮ್ಮ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದರು. ಉದಯ್ ಕಿರಣ್ ಕುಸಿದಾಗಲೆಲ್ಲ ಧೈರ್ಯ ಹೇಳುತ್ತಿದ್ದರು. ಕಿರಿಯ ಪತ್ರಕರ್ತೆ ಜೊತೆ ಬ್ರೇಕಪ್ ಆದಾಗಲೂ ಚಿರಂಜೀವಿ ಉದಯ್ ಕಿರಣ್ ಧೈರ್ಯ ತುಂಬಿದ್ದರು. ಉದಯ್ ಆತ್ಮಹತ್ಯೆಗೆ ಚಿರು ಕಾರಣರಲ್ಲ ಎಂದು ಶ್ರೀದೇವಿ ಸಂದರ್ಶನವೊಂದರಲ್ಲಿ ಹೇಳಿದ್ಧಾರೆ.

ಇದೇವೇಳೆ, ಸಹೋದರ ಉದಯ್ ಕಿರಣ್ ದಾಂಪತ್ಯ ಜೀವನದ ವಿರಸ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ವಿಶಿತಾ ಮತ್ತು ಸಹೋದರ ಉದಯ್ ಕಿರಣ್ ವಿವಾಹ ಮುಗಿಸಿಕೊಂಡು ನಾನು ಮಸ್ಕತ್`ಗೆ ತೆರಳಿದ್ದೆ. ನಾನು ಹಲವು ಬಾರಿ ಕರೆ ಮಾಡಿದಾಗಲೂ ಸಹೋದರ ಮಾತ್ರ ,ಮಾತನಾಡಿದ್ದ. ವಿಶಿತಾ ಮನೆಯಲ್ಲಿರುತ್ತಿರಲಿಲ್ಲ. ಅವರ ಸಂಬಂಧ ಹದಗೆಟ್ಟಿರುವುದು ಗಮನಕ್ಕೆ ಬಂದಿತ್ತು. ಇದೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶ್ರೀದೇವಿ ಹೇಳಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜರ್ಮನಿಯಲ್ಲಿ ಒಂದು ಮೊಟ್ಟೆಯ ಕಥೆ