Select Your Language

Notifications

webdunia
webdunia
webdunia
webdunia

ಜರ್ಮನಿಯಲ್ಲಿ ಒಂದು ಮೊಟ್ಟೆಯ ಕಥೆ

ಜರ್ಮನಿಯಲ್ಲಿ ಒಂದು ಮೊಟ್ಟೆಯ ಕಥೆ
ಬೆಂಗಳೂರು , ಸೋಮವಾರ, 10 ಜುಲೈ 2017 (11:33 IST)
ಬೆಂಗಳೂರು:`ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಾಜ್ ಬಿ. ಶೆಟ್ಟಿ ನಿರ್ದೇಶನದ ಈ ಚಿತ್ರ ಬಿಡುಗಡೆಯಾದಾಗಿನಿಂದ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.
 
ಈ ನಡುವೆ ಚಿತ್ರ ಜರ್ಮನಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜುಗೊಂಡಿರುವುದು ವಿಶೇಷ. `ಒಂದು ಮೊಟ್ಟೆಯ ಕಥೆ' ಚಿತ್ರ ಮೊದಲು ಬಿಡುಗಡೆಯಾಗಿದ್ದೇ ಹೊರದೇಶದಲ್ಲಿ. ಮೇನಲ್ಲಿ ನಡೆದ ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ಇತ್ತು. ಅಮೆರಿಕಾ ನಂತರ ಲಂಡನ್ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿತ್ತು `ಒಂದು ಮೊಟ್ಟೆಯ ಕಥೆ'. 
 
ಜುಲೈ 15ರಂದು `ಒಂದು ಮೊಟ್ಟೆಯ ಕಥೆ' ಚಿತ್ರವು ಜರ್ಮನಿಯ ಲಿವರ್‍ಕುಸನ್‍ನ ಸ್ಕಾಲಾ ಸಿನಿಮಾದಲ್ಲಿ ಮೊದಲು ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಫ್ರಾಂಕ್‍ಫರ್ಟ್, ಮ್ಯೂನಿಚ್, ಬರ್ಲಿನ್, ಹ್ಯಾಂಬರ್ಗ್ ಮುಂತಾದ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಾಣಲಿದೆ. ಇದಾದ ನಂತರ ಆಗಸ್ಟ್‌ನಲ್ಲಿ ಗಾಲ್ಫ್‌‌‌‌ನಲ್ಲಿ ಬಿಡುಗಡೆಯಾಗಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಲುಕ್ ನಲ್ಲಿ ಹುಡುಗರ ನಿದ್ದೆಗೆಡಿಸುತ್ತಿದ್ದಾಳೆ ಆಮಿ