Select Your Language

Notifications

webdunia
webdunia
webdunia
webdunia

`ಯೋಗಿ ಆದಿತ್ಯನಾಥ್ ಗ್ಯಾಸ್ ರಿಲೀಸಿಂಗ್ ಯೋಗ ಮಾಡಲಿ’

yogi adityanath
ನವದೆಹಲಿ , ಭಾನುವಾರ, 26 ಮಾರ್ಚ್ 2017 (10:55 IST)
ಸದಾ ತನ್ನ ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆಯುವ ಬಾಲಿವುಡ್ ನಟಿ ಮತ್ತು ಬರಹಗಾರ್ತಿ ಟ್ವಿಂಕಲ್ ಖನ್ನಾ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನೂ ಬಿಟ್ಟಿಲ್ಲ. ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಗ್ಯಾಸ್ ರಿಲೀಸಿಂಗ್ ಆಸನ ಮಾಡಬೇಕು ಎಂದು ಕಾಲೆಳೆಯುವ ಮೂಲಕ ಅವರ ಅಭಿಮಾನಿಗಲು ಹುಬ್ಬೇರಿಸುವಂತೆ ಮಾಡಿದ್ದಾರೆ.

ಈ ಹಿಂದೆ ಯೋಗಿ ಆದಿತ್ಯಾನಾಥ್ ಮಹಿಳೆಯರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ವಿಂಕಲ್, ಗ್ಯಾಸ್ ರಿಲೀಸ್`ಗೆ ಅನುಕೂಲವಾಗುವ ಆಸನವನ್ನ ಯೋಗಿ ಆದಿತ್ಯನಾಥ್ ಮಾಡಬೇಕು ಎಂದು ವ್ಯಂಗ್ಯವಾಡಿದ್ಧಾರೆ.

ಅಷ್ಟೇ ಅಲ್ಲ, ಯೋಗಿ ಆದಿತ್ಯನಾಥ್ ಫ್ಯಾಶನ್ ಸಹ ಬದಲಾಯಿಸುತ್ತಿದ್ದಾರೆ. ನಾನು ಟ್ವೀಟ್ ಮಾಡಿದ ರೀತಿ, ಏಷಿಯನ್ ಪೇಂಟ್ಸ್`ನವರು, ಹೊಸ ಕೇಸರಿ ಬಣ್ಣವನ್ನ ಪರಿಚಯಿಸಿ ಅದಕ್ಕೆ ಆರೇಂಜ್ ಈಸ್ ದಿ ನ್ಯೂ ಬ್ರೌನ್ ಎಂದು ಟ್ಯಾಗ್ ಲೈನ್ ಕೊಡಬೇಕೆಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ರೈತರಿಗಾಗಿ ನಟ ಪ್ರಕಾಶ್ ರೈ ಮಾಡಿದ್ದೇನು?!