ಶೆಡ್ ಗೆ ಬಾ ಎಂದು ಕುಣಿಯುತ್ತಿದ್ದಾರೆ ದರ್ಶನ್: ರೀಲ್ಸ್ ಈಗ ಭಾರೀ ವೈರಲ್

Krishnaveni K
ಬುಧವಾರ, 10 ಜುಲೈ 2024 (12:13 IST)
ಬೆಂಗಳೂರು: ನಟ ದರ್ಶನ್ ಅರೆಸ್ಟ್ ಆದ ಮೇಲೆ ಕೆಲವು ಟ್ರೋಲ್ ಪೇಜ್ ಗಳಿಗೆ ಹಬ್ಬವಾಗಿದೆ. ಇದೇ ವಿಚಾರವಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಶೆಡ್ ಗೆ ಬಾ ಎನ್ನುವ ರೀಲ್ಸ್ ಭಾರೀ ವೈರಲ್ ಆಗುತ್ತಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿತರಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಸದ್ಯಕ್ಕೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್, ಪವಿತ್ರಾ ಗೌಡ ಆಂಡ್ ಗ್ಯಾಂಗ್ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದೆ ಎಂಬ ಆರೋಪವಿದೆ. ಹೀಗಾಗಿ ಶೆಡ್ ಎನ್ನುವ ಪದ ವೈರಲ್ ಆಗಿದೆ.

ಇದರ ಜೊತೆಗೆ ಇತ್ತೀಚೆಗೆ ಸಹೋದರಿಯನ್ನು ನೋಡಲು ಜೈಲಿಗೆ ಬಂದಿದ್ದ ಪವಿತ್ರಾ ಗೌಡ ಸಹೋದರ ಮಾಧ್ಯಮಗಳಿಗೆ ನಿಮಗೆಲ್ಲಾ ಮಾಡಲು ಕೆಲಸವಿಲ್ಲ ಎಂದಿದ್ದು ಮಾಧ್ಯಮಗಳ ಕೆರಳಿಸಿತ್ತು. ಆತನ ವಿರುದ್ಧ  ಖ್ಯಾತ ಪತ್ರಕರ್ತ ಜಯಪ್ರಕಾಶ್ ಶೆಟ್ಟಿಯಂತೂ ನಮಗೆ ಮಾಡಕ್ಕೆ ಕೆಲಸವಿಲ್ಲ, ಶೆಡ್ ಗೆ ಬಾ ಕುಂಟಾ ಬಿಲ್ಲೆ ಆಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅವರು ಹೇಳಿದ ಈ ಒಂದು ಡೈಲಾಗ್ ಈಗ ಟ್ರೋಲರ್ ಗಳಿಗೆ ಆಹಾರವಾಗಿದೆ. ದರ್ಶನ್ ರ ಬಸಣ್ಣಿ ಬಾ ಎನ್ನುವ ಯಜಮಾನ ಸಿನಿಮಾದ ಹಾಡನ್ನೇ ಬದಲಾಯಿಸಿ ಶೆಡ್ ಗೆ ಬಾ ಎಂದು ಹಾಡು ಮಾಡಿ ರೀಲ್ಸ್ ಹರಿಯಬಿಡಲಾಗಿದೆ. ವಿಶೇಷವೆಂದರೆ ದರ್ಶನ್ ಹಾಡಿನ ದೃಶ್ಯಕ್ಕೇ ಕೆಲವರು ಇಂತಹದ್ದೊಂದು ಬದಲಿ ಸಾಹಿತ್ಯವನ್ನು ರಿಮಿಕ್ಸ್ ಮಾಡಿ ರೀಲ್ಸ್ ಹರಿಯಬಿಡಲಾಗುತ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಮುಂದಿನ ಸುದ್ದಿ
Show comments