Webdunia - Bharat's app for daily news and videos

Install App

ನಾಳೆ ವಿನೀಶ್‌ ಬರ್ತಡೇ: ತಂದೆಯ ಬರುವಿಕೆ ಹೆಚ್ಚು ಮಾಡಿದ ಮಗನ ಹುಟ್ಟುಹಬ್ಬದ ಸಂಭ್ರಮ

sampriya
ಬುಧವಾರ, 30 ಅಕ್ಟೋಬರ್ 2024 (16:42 IST)
photo credit X
ಮಗ ಎಂದರೆ ಜೀವಬಿಡುವ ದರ್ಶನ್‌ ಅವರಿಗೆ ಮಗನ ಹುಟ್ಟು ಹಬ್ಬದ ಹಿಂದಿನ ದಿನವೇ ಜಾಮೀನು ಸಿಗುವ ಮೂಲಕ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ. ಅ.31ರಂದು ವಿನೀಶ್  ಹುಟ್ಟುಹಬ್ಬವನ್ನು ತಂದೆಯ ಜೊತೆ ಆಚರಿಸುವ ಅವಕಾಶ ಸಿಕ್ಕಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದ ನಟ ದರ್ಶನ್‌ಗೆ ನಾಲ್ಕು ತಿಂಗಳ ಬಳಿಕ ಮಧ್ಯಂತರ ಜಾಮೀನು ಮಂಜೂರಾಗಿದೆ. ಜಾಮೀನು ವಿಚಾರ ತಳಿದು ದರ್ಶನ್‌ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಹಂಚಿ ಸಂಭ್ರಮಿಸಿದ್ದಾರೆ.

 ಇನ್ನೂ ಪತ್ನಿ ವಿಜಯಲಕ್ಷ್ಮಿ ಕೂಡಾ ಬಳ್ಳಾರಿಯ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ದರ್ಶನ್‌ಗೆ ಜಾಮೀನು ಸಿಕ್ಕಿರುವುದು ಪುತ್ರ ಡಬಲ್ ಧಮಾಕ ಸಿಕ್ಕಂತಾಗಿದೆ. ಅ.31ರಂದು ವಿನೀಶ್ ಹುಟ್ಟುಹಬ್ಬ ಜೊತೆಗೆ ತಂದೆಯೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಚಾನ್ಸ್ ಸಿಕ್ಕಿದೆ. ನಾಳೆ ತಂದೆಯ ಜೊತೆ ವಿನೀಶ್‌ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಅಂದಹಾಗೆ, ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಕಾಮಾಕ್ಯ ದೇವಿಗೆ ವಿಜಯಲಕ್ಷ್ಮಿ ಧನ್ಯವಾದ ತಿಳಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಕಾಮಾಕ್ಯ ದೇವಸ್ಥಾನದ ಫೋಟೋ ಶೇರ್‌ ಮಾಡಿ ಥ್ಯಾಂಕ್‌ಫುಲ್, ಗ್ರೇಟ್‌ಫುಲ್, ಬ್ಲೆಸ್ಡ್ ಎಂದು ವಿಜಯಲಕ್ಷ್ಮಿ ಬರೆದು ಸಂತಸ ವ್ಯಕ್ತಪಡಿಸಿದ್ದಾರೆ.

ಇದೀಗ ದರ್ಶನ್‌ ಬಿಡುಗಡೆಯನ್ನು ಅವರ ಅಭಿಮಾನಿಗಳು, ಕನ್ನಡದ ನಟ ನಟಿಯರು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ನಟನಾಗಿ ಗೆದ್ದ ಯುವ ರಾಜ್ ಕುಮಾರ್: ಎಕ್ಕ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು

43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

ಭಾಗ್ಯಲಕ್ಷ್ಮೀ ಸೀರಿಯಲ್‌, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್‌

ಮುಂದಿನ ಸುದ್ದಿ
Show comments