ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ತೀವ್ರವಾದ ಬೆನ್ನು ನೋವಿನಿಂದ ಒದ್ದಾಡುತ್ತಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ನಟ, ಆಪ್ತ ಧನ್ವೀರ್ ಇಂದು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.
ಬೆನ್ನು ನೋವು ಸಂಬಂಧ ನಟ ದರ್ಶನ್ ಅವರು ಈಚೆಗೆ ಸ್ಕ್ಯಾನಿಂಗ್ಗೆ ಒಳಪಟ್ಟಿದ್ದರು. ಮೆಡಿಕಲ್ ರಿಪೋರ್ಟ್ನಲ್ಲಿ L5 S1 ಸಮಸ್ಯೆ ಇರೋದು ತಿಳಿದು ಬಂದಿದೆ. ಇನ್ನೂ ದರ್ಶನ್ ಆರೋಗ್ಯ ವಿಚಾರಿಸಲು ಪತ್ನಿ ವಿಜಯಲಕ್ಷ್ಮಿ ಇಂದು ಜೈಲಿಗೆ ಭೇಟಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದರೆ ತಮ್ಮ ಭೇಟಿಯನ್ನು ಕ್ಯಾನ್ಸಲ್ ರದ್ದು ಮಾಡಿದ್ದಾರೆ.
ಆದರೆ ದರ್ಶನ್ ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳು ಧನ್ವೀರ್ ಜತೆ ಸಂಬಂಧ ಸುಶಾಂತ್ ನಾಯ್ಡು ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಈ ವೇಳೆ, ಬೆನ್ನು ನೋವಿನಿಂದ ನರಳುತ್ತಲೇ ಆಪ್ತರನ್ನು ದರ್ಶನ್ ಭೇಟಿಯಾಗಿದ್ದಾರೆ. ಭೇಟಿ ವೇಳೆ ಮುಂದಿನ ಕಾನೂನು ಹೋರಾಟದ ಬಗ್ಗೆ ಹಾಗೂ ಆರೋಗ್ಯದ ಕುರಿತು ಮಾತುಕತೆ ನಡೆಸಿದ್ದಾರೆ. ಇನ್ನೂ ಇಂದು ಕೂಡಾ ಆಪ್ತರು ತಂದ ಬ್ಯಾಗ್ಅನ್ನು ಎತ್ತಿಕೊಂಡು ಹೋಗಲು ದರ್ಶನ್ ಪರದಾಡಿದ್ದಾರೆ.
ಅಂದಹಾಗೆ, ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಆರೋಪಿ ದರ್ಶನ್ರನ್ನು ಜೂನ್ 11ರಂದು ಬಂಧಿಸಿದ್ದು, ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.