Select Your Language

Notifications

webdunia
webdunia
webdunia
webdunia

ಈಗಿನ ನಟಿಯರೇ ಲಕ್ಕಿ ಎಂದ ತೆಲುಗು ನಟಿ ರಾಶಿ

ಈಗಿನ ನಟಿಯರೇ ಲಕ್ಕಿ ಎಂದ ತೆಲುಗು ನಟಿ ರಾಶಿ
ಹೈದ್ರಾಬಾದ್ , ಶುಕ್ರವಾರ, 21 ಏಪ್ರಿಲ್ 2017 (10:39 IST)
ನಮ್ಮ ಕಾಲದಲ್ಲಿ ನಟಿಯರಿಗೆ ಹೇಳಿಕೊಳ್ಳುವಂತಹ ಸೌಲಭ್ಯವಿರಲಿಲ್ಲ. ಎಲ್ಲೆಂದರಲ್ಲಿ ಬಟ್ಟೆ ಬದಲಿಸಬೇಕಿತ್ತು. ಇಂದಿನ ನಟಿಯರಿಗೆ ಎಲ್ಲ ರೀತಿಯ ಸೌಲಭ್ಯ ಸಿಗುತ್ತಿದೆ ಎಂದು ಲಂಕಾ ಸಿನಿಮಾ ಚಿತ್ರೀಕರಣ ವೇಳೆ ನಟಿ ರಾಶಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ತಮ್ಮ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.

ನಮ್ಮ ಕಾಲದಲ್ಲಿ ನಟಿಯರಿಗೆ ಸೌಲಭ್ಯಗಳೇ ಇರಲಿಲ್ಲ. ನಮಗಾಗಿ ಯಾವುದೇ ವಿಶೇಷತಂಡವಾಗಗಲಿ ಇರುತ್ತಿರಲಿಲ್ಲ. ನಾವು ಬಟ್ಟೆ ಬದಲಿಸಬೇಕೆಂದರೆ ಯಾರಾದರೊಬ್ಬರು ಅಡ್ಡ ಪರದೆ ಹಿಡಿದು ನಿಂತಿರಬೇಕಿತ್ತು. ಅಲ್ಲಿಯೇ ಮುಜುಗರದಿಂದ ಬಟ್ಟೆ ಬದಲಿಸಬೇಕಿತ್ತು ಎಂದಿದ್ದಾರೆ.

ಇದೇವೇಳೆ, ಇಂದಿನ ನಟಿಯರಿಗೆ ನೀಡುತ್ತಿರುವ ಸಂಭಾವನೆ ಸಹ ಅಸಾಧಾರಣವಾದದ್ದು. ನಮಗೆ ನೀಡುತ್ತಿದ್ದ ಸಂಭಾವನೆ ನಿಜವಾಗಿಯೂ ಅತ್ಯಂತ ಕಡಿಮೆ, ಒಬ್ಬ ಪೋಷಕ ಕಲಾವಿದ ಇಂದಿನ ದಿನಗಳಲ್ಲಿ ಪಡೆಯುವ ದಿನದ ಸಂಭಾವನೆಗೆ ಸಮಾನಾವಾದದು ಎಂದಿದ್ದಾರೆ.

ಸದ್ಯ. ಟೆಲಿಪತಿ ಕಥಾಧರಿತ ಲಂಕಾ ಚಿತ್ರದಲ್ಲಿ ರಾಶಿ ನಟಿಸುತ್ತಿದ್ದು, ಪತಿ ಎಸ್.ಎಸ್. ನಿವಾಸ್ ಚಿತ್ರ ನಿರ್ದೇಶಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲೂ ಫಿಲಂನಲ್ಲೂ ನಟಿಸಲು ರೆಡಿ ಎಂದ ತೆಲುಗು ನಟಿ