Select Your Language

Notifications

webdunia
webdunia
webdunia
webdunia

ರಜನೀಕಾಂತ್ ಅಳಿಯ ಧನುಷ್ ಜನ್ಮರಹಸ್ಯ ಇಂದು ಬಯಲು?!

ರಜನೀಕಾಂತ್ ಅಳಿಯ ಧನುಷ್ ಜನ್ಮರಹಸ್ಯ ಇಂದು ಬಯಲು?!
Chennai , ಗುರುವಾರ, 2 ಮಾರ್ಚ್ 2017 (10:09 IST)
ಚೆನ್ನೈ: ರಜನೀಕಾಂತ್ ಅಳಿಯ, ಐಶ್ವರ್ಯಾ ರಜನೀಕಾಂತ್ ಪತಿ, ತಮಿಳು ನಟ ಧನುಷ್ ಹೆತ್ತವರು ಯಾರು? ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ. ಮದರಾಸ್ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ಇಂದು ಕ್ಲೈಮ್ಯಾಕ್ಸ್ ಕಾಣುವ ನಿರೀಕ್ಷೆಯಿದೆ.


ಇದುವರೆಗೆ ಧನುಷ್ ನಿರ್ದೇಶಕ ಕಸ್ತೂರಿ ರಾಜನ್ ಮತ್ತು ವಿಜಯಲಕ್ಷ್ಮಿ ಪುತ್ರ ಎಂದೇ ನಂಬಲಾಗಿತ್ತು. ಆದರೆ ಕದಿರೇಸನ್ ಮತ್ತು ಮೀನಾಕ್ಷಿ ಧನುಷ್ ನಮ್ಮ ಮಗ ಎಂದು ನ್ಯಾಯಾಲಯದಲ್ಲಿ ದೂರಿತ್ತಿದ್ದರು. ಅದರಂತೆ ಧನುಷ್ ಈಗಾಗಲೇ ವಿಚಾರಣೆಗೂ ಹಾಜರಾಗಿದ್ದರು.

ಇಂದು ವೈದ್ಯಕೀಯ ಪರೀಕ್ಷೆಗೊಳಪಡಲಿದ್ದಾರೆ ನಟ ಧನುಷ್. ಆ ಮೂಲಕ ಧನುಷ್ ಯಾರ ಮಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಬಹುದೆಂಬ ನಿರೀಕ್ಷೆ ಎಲ್ಲರೂ. ಆದರೆ ಧನುಷ್ ಮಾತ್ರ ಈಗಲೂ ತಾನು ಕಸ್ತೂರಿರಾಜನ್ ಮಗ ಎಂದೇ ಹೇಳುತ್ತಿದ್ದಾರೆ. ಸದ್ಯಕ್ಕೆ ಧನುಷ್ ಹುಟ್ಟು ಮಚ್ಚೆಗಳ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಕದಿರೇಷನ್ ವಾದಕ್ಕೆ ಪುಷ್ಠಿ ಸಿಕ್ಕರೆ, ಧನುಷ್ ಮುಂದೆ ಡಿಎನ್ ಎ ಪರೀಕ್ಷೆಯನ್ನೂ ಎದುರಿಸಬೇಕಾದೀತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆ ನಟಿಗೆ ಅವಕಾಶಕ್ಕಾಗಿ ಹಾಸಿಗೆಗೆ ಆಹ್ವಾನಿಸಿದ್ದರಂತೆ!