Select Your Language

Notifications

webdunia
webdunia
webdunia
webdunia

ಆ ನಟಿಗೆ ಅವಕಾಶಕ್ಕಾಗಿ ಹಾಸಿಗೆಗೆ ಆಹ್ವಾನಿಸಿದ್ದರಂತೆ!

ಆ ನಟಿಗೆ ಅವಕಾಶಕ್ಕಾಗಿ ಹಾಸಿಗೆಗೆ ಆಹ್ವಾನಿಸಿದ್ದರಂತೆ!
Hyderabad , ಗುರುವಾರ, 2 ಮಾರ್ಚ್ 2017 (09:32 IST)
ಎಲ್ಲಾ ಚಿತ್ರೋದ್ಯಮಗಳಲ್ಲೂ ಇದೇ ಪರಿಸ್ಥಿತಿನಾ? ಮೊನ್ನೆ ಮಲಯಾಳಂನಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ. ಆಗಾಗ ನಟಿಯರ ಮೇಲೆ ಲೈಂಗಿಕ ಕಿರುಕುಳ. ಇತ್ತೀಚೆಗಷ್ಟೆ ನಟ ಶರತ್ ಕುಮಾರ್ ಪುತ್ರಿ ವರಲಕ್ಷ್ಮಿ ಶರತ್ ಕುಮಾರ್ ತಮಗೂ ಆ ರೀತಿಯ ಕಹಿ ಅನುಭವ ಎದುರಾಗಿದ್ದು ಎಂದು ತಿಳಿಸಿದ್ದರು.
 
ಈಗ ದಕ್ಷಿಣ ಭಾರತದ ಅದರಲ್ಲೂ ಟಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಮಾಧವಿ ಲತಾ ಎಂಬ ಬೆಡಗಿ ಸಹ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.  ನಿಮಗೆ ಒಳ್ಳೆಯ ಅವಕಾಶ ಕೊಡುತ್ತೇವೆಂದು, ಅದಕ್ಕೆ ತಾವು ಸ್ವಲ್ಪ ಕೋಆಪರೇಟ್ ಮಾಡಬೇಕೆಂದು ನಿರ್ದೇಶಕ, ನಿರ್ಮಾಪಕರು ಷರತ್ತು ಹಾಕುತ್ತಿದ್ದರೆಂದು ತಿಳಿಸಿದ್ದಾರೆ.
 
ಆದರೆ ತಾವು ಅದಕ್ಕೆ ಸೊಪ್ಪು ಹಾಕುತ್ತಿರಲಿಲ್ಲ. ಹಾಗಾಗಿ ತಮಗೆ ಅವಕಾಶಗಳು ಸಿಗಲಿಲ್ಲ. ಆತ್ಮಸಾಕ್ಷಿಗೆ ವಿರುದ್ಧವಾಗಿ ಆ ರೀತಿ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ. ಆ ರೀತಿ ಯಾರೆಲ್ಲಾ ಮಾಡಿದ್ದಾರೆ ಎಂದು ನಾನು ಬಾಯಿಬಿಟ್ಟರೆ ಒಂದಷ್ಟು ಜನರ ಸಂಸಾರ ಛಿದ್ರಛಿದ್ರವಾಗುತ್ತದೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿ ಪುತ್ರಿಯ ಸ್ಟನ್ನಿಂಗ್ ಲುಕ್ ನೋಡಿ