Publish Date: Mon, 24 Apr 2023 (06:50 IST)
Updated Date: Mon, 24 Apr 2023 (06:56 IST)
Photo Courtesy: Instagram
ಬೆಂಗಳೂರು: ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಕುಮಾರ್ 95 ನೇ ಜನ್ಮ ಜಯಂತಿ ಇಂದು. ಅವರ ಜೀವನವೇ ಹಲವರಿಗೆ ಆದರ್ಶ.
ಡಾ.ರಾಜ್ ಕುಮಾರ್ ಸಿನಿಮಾಗಳ ಮೂಲಕವೇ ಹಲವರ ಜೀವನಕ್ಕೆ ಆದರ್ಶವಾದವರು. ಅವರ ಸಿನಿಮಾ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಮೂವರು ವ್ಯಕ್ತಿಗಳೆಂದರೆ ಸಹೋದರ ವರದರಾಜ್, ಸಾಹಿತಿ ಚಿ.ಉದಯಶಂಕರ್ ಮತ್ತು ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್.
ಇವರು ಮೂವರ ಸಾಥ್ ಇಲ್ಲದೇ ಅಣ್ಣಾವ್ರು ಯಾವತ್ತೂ ಸಿನಿಮಾ ಮಾಡಿದವರೇ ಅಲ್ಲ. ಹೀಗಾಗಿ ರಾಜ್ ಕುಮಾರ್ ಯಶಸ್ಸಿನ ಹಿಂದೆ ಈ ಮೂವರ ಪಾತ್ರವೂ ಹಿರಿದಾಗಿತ್ತು.