Publish Date: Tue, 05 Dec 2023 (10:30 IST)
Updated Date: Tue, 05 Dec 2023 (10:36 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಟೈಟಲ್ ಘೋಷಣೆ ಡಿಸೆಂಬರ್ 8 ಕ್ಕೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ.
ಯಶ್19 ಬಗ್ಗೆ ಇಂತಹದ್ದೊಂದು ಮಾಹಿತಿ ಸಿಗುತ್ತಿದ್ದಂತೇ ಅಭಿಮಾನಿಗಳು ಭಾರೀ ಖುಷಿಯಾಗಿದ್ದಾರೆ. ಬಹಳ ದಿನಗಳ ನಂತರ ಯಶ್ ಸಿನಿಮಾ ಬಗ್ಗೆ ಅಪ್ ಡೇಟ್ ಸಿಗುತ್ತಿರುವುದು ಅಭಿಮಾನಿಗಳಿಗೂ ಖುಷಿ.
ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಲಿದೆ. ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರುವುದಂತೂ ಪಕ್ಕಾ. ಆದರೆ ನಿರ್ದೇಶನ ಮತ್ತು ನಾಯಕಿ ನಟಿ ಯಾರು ಎಂಬ ಬಗ್ಗೆ ಎಲ್ಲರಿಗೂ ಕುತೂಹಲವಿದೆ.
ಮೂಲಗಳ ಪ್ರಕಾರ ಸೌತ್ ಸುಂದರಿ ಸಾಯಿ ಪಲ್ಲವಿ ಚಿತ್ರಕ್ಕೆ ನಾಯಕಿಯಾಗುವ ಸಾಧ‍್ಯತೆಯಿದೆ. ಗೋವಾದಲ್ಲಿ ನಡೆಯುವ ಡ್ರಗ್ ಮಾಫಿಯಾ ಕುರಿತು ಕತೆ ಸಾಗಲಿದ್ದು, ಇದಕ್ಕೆ ಮಹಿಳಾ ನಿರ್ದೇಶಕಿ ಎನ್ನಲಾಗಿದೆ. ಡಿಸೆಂಬರ್ 8 ರಂದು ಬೆಳಿಗ್ಗೆ 9.55 ಕ್ಕೆ ಟೈಟಲ್ ರಿವೀಲ್ ಆಗಲಿದೆ.