ಅರ್ಜುನ್ ಸರ್ಜಾ ಮೇಲೆ ಶೃತಿ ಹರಿಹರನ್ ಮಾಡಿದ ಆರೋಪಕ್ಕೆ ಈ 6 ಮಂದಿ ಮುಖ್ಯ ಸಾಕ್ಷಿಯಂತೆ

Webdunia
ಭಾನುವಾರ, 28 ಅಕ್ಟೋಬರ್ 2018 (07:10 IST)
ಬೆಂಗಳೂರು : ನಟಿ ಶೃತಿ ಹರಿಹರನ್ ಈಗಾಗಲೇ ನಟ ಅರ್ಜುನ್ ಸರ್ಜಾ ಅವರ  ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ, ಹಾಗೇ ಅವರ ಈ ಆರೋಪಕ್ಕೆ ಇದೀಗ 6 ಮಂದಿಯನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ.


ಬೆಂಗಳೂರಿನ ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ವಿಸ್ಮಯ ಶೂಟಿಂಗ್ ನಲ್ಲಿ ಅರ್ಜುನ್ ಸರ್ಜಾ ಅವರು ತನ್ನ ಜೊತೆ ಅಸಭ್ಯವಾಗಿ ವರ್ತಿಸಿದಕ್ಕೆ ಬೇಸರಗೊಂಡಿದ್ದ ತನ್ನನ್ನು ತನ್ನ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಸಮಾಧಾನ ಮಾಡಿದರು ಎಂದು ದೂರಿನಲ್ಲಿ ತಿಳಿಸಿದ್ದರು. ಹಾಗೇ ಇದೆಲ್ಲವನ್ನು ಸಹಾಯಕ ನಿರ್ದೇಶಕ ಭರತ್ ನೀಲಕಂಠ ಮತ್ತು ಮೋನಿಕಾ ಹಾಗೂ ತಮ್ಮ ಗೆಳತಿ ಯಶಸ್ವಿನಿ ಬಳಿ ಹೇಳಿ ಕಣ್ಣೀರಿಟ್ಟಿದ್ದೆ ಎಂಬುದಾಗಿ ತಿಳಿಸಿದ್ದರು.


ಅಲ್ಲದೇ ಅರ್ಜುನ್ ಸರ್ಜಾ ಅವರು ರೆಸಾರ್ಟ್‍ಗೆ ಬಾ. ನಾವಿಬ್ಬರೂ ಖುಷಿಪಡೋಣ ಎಂದು ಶೃತಿ ಹರಿಹರನ್ ಬಳಿ ಸೆಕ್ಸಿ ಡೈಲಾಗ್  ಹೊಡೆದಾಗ ಆ ವೇಳೆ ತನ್ನ ಜೊತೆ ಬೋರೇಗೌಡ, ಕಿರಣ್ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದಕಾರಣ ಇದೀಗ  ಶೃತಿ ಹರಿಹರನ್ ಆರೋಪಕ್ಕೆ ವಿಸ್ಮಯ ಸಿನಿಮಾದ ನಿರ್ದೇಶಕ ಅರುಣ್ ವೈದ್ಯನಾಥನ್, ಸಹಾಯಕ ನಿರ್ದೇಶಕ ಭರತ್ ನೀಲಕಂಠ, ಮೋನಿಕಾ, ಶೃತಿ ಹರಿಹರನ್ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಹಾಗೂ ಗೆಳತಿ ಯಶಸ್ವಿನಿ ಅವರನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಆದಕಾರಣ ಈ 6 ಮಂದಿ ನೀಡುವ ಹೇಳಿಕೆಯ ಮೇಲೆ ನಟ ಅರ್ಜುನ್ ಸರ್ಜಾ ಭವಿಷ್ಯ ನಿಂತಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ