ನಟ ದರ್ಶನ್‌ ಜಾಮೀನಿಗೆ ಶ್ಯೂರಿಟಿ ನೀಡಿದ ಇಬ್ಬರು ವ್ಯಕ್ತಿಗಳು ಇವರೇ

sampriya
ಬುಧವಾರ, 30 ಅಕ್ಟೋಬರ್ 2024 (15:52 IST)
photo credit X
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದ ನಟ ದರ್ಶನ್‌ಗೆ ಇಂದು ಮಧ್ಯಂತರ ಜಾಮೀನು ಮಂಜೂರು ಆಗಿದೆ. ಇದೀಗ ಹೇಗಾದರೂ ಇಂದೇ ಜಾಮೀನು ಪ್ರಕ್ರಿಯೆ ಮುಗಿಸಿ ದರ್ಶನ್​ನನ್ನು ಕರೆದುಕೊಂಡು ಬರಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗ್ತಿದೆ.

ಇನ್ನೂ ದರ್ಶನ್‌ ಅವರು ಹೊರಗಡೆ ಇದ್ದಾಗಲೂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಧನ್ವೀರ್‌ ಅವರ ಆಗಾಗ ಜೈಲಿಗೆ ಭೇಟಿ ನೀಡಿ ದರ್ಶನ್ ಜತೆ ಮಾತುಕತೆ ನಡೆಸಿ‌ ದೈರ್ಯ ತುಂಬುತ್ತಿದ್ದರು. ಇದೀಗ ಅವರೇ ದರ್ಶನ್​ ಜಾಮೀನಿಗೆ ಶ್ಯೂರಿಟಿ ನೀಡ್ತಿದ್ದಾರೆ.

ಶ್ಯೂರಿಟಿ ಪೂರೈಸಲು ನಟ ಧನ್ವಿರ್‌ ಆಗಮಿಸಿದ್ದಾರೆ. ವಕೀಲ ಸುನೀಲ್ ಜೊತೆ ನಟ ಧನ್ವಿರ್ ಆಗಮಿಸಿದ್ದರು. ಹೈಕೋರ್ಟ್ ಆದೇಶ ಪ್ರತಿ, ದಾಖಲೆಗಳ ಜೊತೆ ವಕೀಲರು ಆಗಮಿಸಿದ್ದರು.

ಬಹುತೇಕ ಇಂದೇ ಜೈಲಿನಿಂದ ದರ್ಶನ್ ರಿಲೀಸ್ ಆಗುತ್ತಾರೆ ಎನ್ನಲಾಗಿದೆ.   ಇನ್ನೂ ದರ್ಶನ್‌ಗೆ ಹಲವು ಷರತ್ತು ನೀಡಿ ಜಾಮೀನು ಮಂಜೂರು ಮಾಡಲಾಗಿದೆ. ಇನ್ನೂ ದರ್ಶನ್‌ಗೆ ಧನ್ವೀರ್‌ ಜತೆ ಸಹೋದರ ದಿನಕರ್‌ ತೂಗುದೀಪ ಕೂಡಾ ಶ್ಯೂರಿಟಿ ನೀಡಲಿದ್ದಾರೆ.

ದಿನಕರ್‌ ಕೂಡ ಕೋರ್ಟ್ ಗೆ ಹಾಜರಾಗಿದ್ದಾರೆ. ದರ್ಶನ್ ಪಾಸ್ ಪೋರ್ಟ್‌ವನ್ನು ದಿನಕರ್‌ ಕೋರ್ಟ್‌ಗೆ ತಂದಿದ್ದಾರೆ. ವಕೀಲರು ಕೋರ್ಟ್ ಗೆ ಪಾಸ್ ಪೋರ್ಟ್ ಸರೆಂಡರ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಕಾಂತಾರ ವೀಕ್ಷಿಸಿದ ಅಲ್ಲು ಅರ್ಜುನ್, ಸಿನಿಮಾ ಬಗ್ಗೆ ಹೀಗೆ ಬರೆದಿದ್ದಾರೆ

BB Season 12: ಹೊಸ ಆಟ ಶುರು ಮಾಡಿದ ಅಶ್ವಿನಿ ಗೌಡ ಕಾಟಕ್ಕೆ ಮನೆ ಮಂದಿ ಸುಸ್ತು

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ

ಮುಂದಿನ ಸುದ್ದಿ
Show comments