Publish Date: Wed, 12 Oct 2016 (16:19 IST)
Updated Date: Wed, 12 Oct 2016 (16:23 IST)
ತಮಿಳಿನ ಕಬಾಲಿ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಆದರೆ, ಸೂಪರ್ ಸ್ಟಾರ್ ರಜನಿಕಾಂತ್, ಚಿತ್ರಕಥೆಯನ್ನು ಇಂಗ್ಲೀಷ್ ಮತ್ತು ಮರಾಠಿಯಲ್ಲಿ ತರ್ಜುಮೆ ಮಾಡಿ ಸಹಕರಿಸಿದರು. ಅವರಂತಹ ಸೂಪರ್ ಸ್ಟಾರ್ ನಟ ಭೂಮಿಯ ಮೇಲೆ ಮತ್ತೊಬ್ಬರಿಲ್ಲ ಎಂದು ಹಾಟ್ ನಟಿ ರಾಧಿಕಾ ಆಪ್ಟೆ ಗುಣಗಾನ ಮಾಡಿದ್ದಾರೆ.
ರಜನಿಕಾಂತ್ ತುಂಬಾ ಸರಳ, ಪ್ರಾಮಾಣಿಕ ಜೀವಿ, ಕಠಿಣ ಪರಿಶ್ರಮದಿಂದ ದುಡಿಯುವ ವ್ಯಕ್ತಿ. ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವ ಅವರ ಗುಣಗಳಿಂದಾಗಿ ಅವರಿಗಿಂತ ದೊಡ್ಡ ಸೂಪರ್ ಸ್ಟಾರ್ ಯಾರೂ ಇಲ್ಲ ಎಂದಿದ್ದಾರೆ.
ತಮಿಳು ಬಾರದಿರುವುದರಿಂದ, ಮರಾಠಿ ಭಾಷೆಯಲ್ಲಿ ರಜನಿಯೊಂದಿಗೆ ಮಾತನಾಡಿದ್ದೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ನಾನು ರಜನಿಕಾಂತ್ ಅವರಿಗೆ ಮರಾಠಿ ಭಾಷೆಯಲ್ಲಿಯೇ ಪರಿಚಯ ಮಾಡಿಕೊಂಡೆ ಎಂದು ನುಲಿದರು.
ನಾನು ರಜನಿಕಾಂತ್ ಅವರಿಗೆ ನಿಮಗೆ ಮರಾಠೆ ಭಾಷೆ ಬರುತ್ತದೆಯೇ ಎಂದು ಕೇಳಿದೆ. ಅವರು ಹೌದು ಎಂದಾಗ ನಾವಿಬ್ಬರು ಮರಾಠಿ ಭಾಷೆಯಲ್ಲಿ ಮಾತುಕತೆ ಮುಂದುವರಿಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಕರ್ನಾಟಕದ ಗಡಿಜಿಲ್ಲೆಯಾದ ಬೆಳಗಾವಿಯವಳಾಗಿದ್ದರಿಂದ ಮರಾಠಿ ಚೆನ್ನಾಗಿ ಮಾತನಾಡುತ್ತೇನೆ. ರಜನಿ ಕೂಡಾ ಮರಾಠಿ ಕುಟುಂಬದಿಂದ ಬಂದವರಾಗಿದ್ದಾರೆ ಎಂದು ಹಾಟ್ ಹಾಟ್ ನಟಿ ರಾಧಿಕಾ ಆಪ್ಟೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ