Publish Date: Wed, 12 Oct 2016 (16:04 IST)
Updated Date: Wed, 12 Oct 2016 (16:09 IST)
ರಾಬ್ತಾ ಚಿತ್ರದಲ್ಲಿ ನಟ ಸುಶಾಂತ್ ಸಿಂಗ್ ರಾಜಪೂತ್ ಮತ್ತು ಕ್ರಿತಿ ಸನೋನ್ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಟ ವರುಣ್ ಶರ್ಮಾ ಹೇಳಿದ್ದಾರೆ. ಇಬ್ಬರ ನಡುವಿನ ಕೆಮೆಸ್ಟ್ರಿಗೆ ಪ್ರೇಕ್ಷಕರು ಮಣೆಹಾಕುವ ವಿಶ್ವಾಸವಿದೆ ಎಂದಿದ್ದಾರೆ.
ದಿನೇಶ್ ವಿಜಾನ್ ರಾಬ್ತಾ ಚಿತ್ರ ನಿರ್ದೇಶನದೊಂದಿಗೆ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೊಂದು ಅದ್ಭುತ ಲವ್ ಸ್ಟೋರಿ ಎಂದು ತಿಳಿಸಿದ್ದಾರೆ.
ರಾಬ್ತಾ ಚಿತ್ರದಲ್ಲಿ ನಟ ಸುಶಾಂತ್ ಮತ್ತು ನಟಿ ಕ್ರಿತಿ ಸನೋನ್ ಅವರೊಂದಿಗೆ ನಟನೆಯ ಅನುಭವ ತುಂಬ ಸಂತಸ ತಂದಿದೆ. ನಿರ್ದೇಶಕ ದಿನೇಶ್ ಅವರ ಆಲೋಚನೆಗಳು ಅದ್ಭುತವಾಗಿ ತೆರೆಯ ಮೇಲೆ ಮೂಡಿ ಬಂದಿವೆ ಎಂದು ಹೇಳಿದ್ದಾರೆ.
ಕಳೆದ ವರ್ಷದಿಂದ ಸುಶಾಂತ್ ಮತ್ತು ಕ್ರಿತಿ ಸಾನೋನ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವರದಿಗಳಿದ್ದರೂ ವರದಿಗಳನ್ನು ಸುಶಾಂತ್ ಮತ್ತು ಸಾನೋನ್ ಖಚಿತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ವರುಣ್ ಶರ್ಮಾ, ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ನಟನೆಯ ದಿಲ್ವಾಲೆ ಚಿತ್ರದಲ್ಲಿ ಕ್ರಿತಿ ಸಾನೋನ್ ಅವರೊಂದಿಗೆ ನಟಿಸಿ ಪ್ರತಿಭಾವಂತ ನಟ ಎಂದು ಕರೆಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ