Select Your Language

Notifications

webdunia
webdunia
webdunia
webdunia

ರಣವೀರ್ ನನ್ನನ್ನು ಉತ್ತಮ ನಟಿಯಾಗಿ ರೂಪಿಸಿದ್ದಾರೆ: ವಾಣಿ ಕಪೂರ್

ರಣವೀರ್ ನನ್ನನ್ನು ಉತ್ತಮ ನಟಿಯಾಗಿ ರೂಪಿಸಿದ್ದಾರೆ: ವಾಣಿ ಕಪೂರ್
ಪ್ಯಾರಿಸ್ , ಬುಧವಾರ, 12 ಅಕ್ಟೋಬರ್ 2016 (15:46 IST)
ಬಾಲಿವುಡ್ ಚಿತ್ರರಂಗದಲ್ಲಿ ಹಿರಿಯರಾದ ಮತ್ತು ಯಶಸ್ವಿ ನಟನಾದ ರಣವೀರ್ ಸಿಂಗ್, ನನ್ನನ್ನು ಚಿತ್ರರಂಗಕ್ಕೆ ಹೊಸಬಳು ಎಂದು ಕಾಣಲಿಲ್ಲ. ಇದು ಬೇಫಿಕ್ರೆ ಚಿತ್ರದ ನಟಿ ವಾಣಿಕಪೂರ್ ಮನದಾಳದ ಮಾತು.  
28 ವರ್ಷ ವಯಸ್ಸಿನ ನಟಿ ವಾಣಿಕಪೂರ್ ಶುದ್ಧ ದೇಸಿ ರೋಮ್ಯಾನ್ಸ್ ಚಿತ್ರದಿಂದ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದಿತ್ಯ ಚೋಪ್ರಾ ನಿರ್ದೇಶನದ ಚಿತ್ರದಲ್ಲಿ ರಣವೀರ್ ಸಿಂಗ್ ಕೂಡಾ ವಾಣಿಯೊಂದಿಗೆ ನಟಿಸಿದ್ದರು.
 
ರಣವೀರ್ ಚಿಂತನೆ ಮತ್ತು ಶಿಸ್ತುಬದ್ಧ ಜೀವನ ಅಚ್ಚರಿ ತರುವಂತಹದು. ಶೂಟಿಂಗ್ ಸಂದರ್ಭದಲ್ಲಿ ತುಂಬಾ ಸಾಮಾನ್ಯವಾಗಿರುತ್ತಾರೆ. ಇದರಿಂದ ಹೊಸಬರಿಗೆ ಅವರೊಂದಿಗೆ ನಟಿಸಲು ಆತಂಕ ಕಾಡುತ್ತದೆ. ಆದರೆ, ನಮ್ಮ ಆತಂಕವನ್ನು ರಣವೀರ್ ದೂರ ಮಾಡುತ್ತಾರೆ ಎಂದು ಹೊಗಳಿದರು. 
 
ರಣವೀರ್ ತುಂಬಾ ಸ್ನೇಹ ಜೀವಿಯಾಗಿದ್ದರಿಂದ ಎಲ್ಲರೊಂದಿಗೂ ಬೇಗ ಬೆರೆಯುತ್ತಾರೆ. ಇದರಿಂದ ನನ್ನಂತ ಹೊಸಬರಿಗೆ ಉತ್ತಮ ನಟನೆಯ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ನಾನೇನು ಅವರಿಗಿಂತ ಕಡಿಮೆಯಲ್ಲ ಎನ್ನುವ ಭಾವನೆ ಮೂಡಿಸುತ್ತಾರೆ ಎಂದರು.
 
ಬೇಫಿಕ್ರೆ ಚಿತ್ರದ ಹೆಚ್ಚಿನ ಭಾಗವನ್ನು ಪ್ಯಾರಿಸ್‌ನಲ್ಲಿ ಶೂಟ್ ಮಾಡಲಾಗಿದೆ. ನಿನ್ನೆ ಚಿತ್ರದ ಟ್ರೇಲರ್‌ನ್ನು ಐಫೆಲ್ ಟವರ್‌ನಲ್ಲಿ ಆಯೋಜಿಸಲಾಗಿದ್ದು, ನಗರದ ಮೇಯರ್ ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಬಾಲಿವುಡ್ ಹಾಟ್ ನಟಿ ವಾಣಿ ಕಪೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ತಂದೆ ಸುರೇಂದ್ರ ಶೆಟ್ಟಿ ನಿಧನ...