Select Your Language

Notifications

webdunia
webdunia
webdunia
webdunia

ರಜನೀಕಾಂತ್ ಅಭಿನಯದ ಅಣ್ಣಾತೆ ಚಿತ್ರದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್

ರಜನೀಕಾಂತ್ ಅಭಿನಯದ ಅಣ್ಣಾತೆ ಚಿತ್ರದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್
ಚೆನ್ನೈ , ಮಂಗಳವಾರ, 4 ಆಗಸ್ಟ್ 2020 (10:24 IST)
ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷೆಯ ಅಣ್ಣಾತೆ ಚಿತ್ರದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ ಎನ್ನಲಾಗಿದೆ.

ರಜನೀಕಾಂತ್ ಅಭಿನಯದ ಬಹುನಿರೀಕ್ಷೆಯ ಅಣ್ಣಾತೆ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಕೊರೊನಾ ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ. ಅಲ್ಲದೆ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದ ಶೂಟಿಂಗ್ ಕೊರೊನಾ ಭೀತಿ ಹಿನ್ನಲೆಯಲ್ಲಿ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ.

ಆದರೆ ಈ ನಡುವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾತೆ ಚಿತ್ರದ ಕಥೆ ಹರಿದಾಡುತ್ತಿದೆ. ಸಿನಿಮಾದ ಎಲ್ಲಾ ಪಾತ್ರಗಳ ಹೆಸರು, ಕಥೆ ಹರಿದಾಡುತ್ತಿದೆ. ಹಾಗೇ ಈ ಚಿತ್ರದಲ್ಲಿ ಖುಷ್ಬೂ, ಮೀನಾ, ಕೀರ್ತಿ ಸುರೇಶ್ ನಟಿಸುತ್ತಿದ್ದು, ಅವರ ಪಾತ್ರಗಳು ರಿವಿಲ್ ಆಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿ ಬಾಯ್ ಯಶ್-ರಾಧಿಕಾ ಮಕ್ಕಳ ರಕ್ಷಾ ಬಂಧನ ನೋಡಿ ನೆಟ್ಟಿಗರು ಫುಲ್ ಫಿದಾ