ದೀಪಿಕಾ ತೊಡಿಸಿದ ಉಂಗುರ ತುಂಬಾನೇ ಸ್ಪೆಷಲ್: ಗೊಂದಲಕ್ಕೆ ತೆರೆ ಎಳೆದ ನಟ ರಣವೀರ್ ಸಿಂಗ್

Sampriya
ಗುರುವಾರ, 9 ಮೇ 2024 (15:21 IST)
Photo Courtesy X
ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಈಚೆಗೆ ತಮ್ಮ ಇನ್ಸ್‌ಸ್ಟಾಗ್ರಾಂನಿಂದ ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗಿನ  ಮದುವೆ ಫೋಟೋವನ್ನು ಡಿಲೀಟ್ ಮಾಡಿ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು.

ಆದರೆ ಈ ಎಲ್ಲ ಗೊಂದಲಕ್ಕೆ ನಟ ರಣವೀರ್ ಸಿಂಗ್ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ತಮ್ಮ ಮದುವೆ ಮತ್ತು ನಿಶ್ಚಿತಾರ್ಥದ ಉಂಗುರಗಳನ್ನು ತೋರಿಸಿದರು. ಅಷ್ಟು ಮಾತ್ರವಲ್ಲದೆ, ಈ ಉಂಗುರಗಳು ತನ್ನ ನೆಚ್ಚಿನ ಅತ್ಯಂತ ಪ್ರಿಯವಾದುದು ಎಂದು ರಣವೀರ್ ಸಿಂಗ್ ಹೇಳಿದರು.

ಈ ಮೂಲಕ ರಣವೀರ್ ಸಿಂಗ್ ತಮ್ಮಿಬ್ಬರ ಸಂಬಂಧಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.

ರಣವೀರ್ ಸಿಂಗ್ ಅವರ ತಮ್ಮ ಸಾಮಾಜಿಕ ಜಾಲತಾನದಲ್ಲಿ ದೀಪಿಕಾ ಜತೆಗಿನ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದಕ್ಕೆ ಅಭಿಮಾನಿಗಳು ಚಿಂತೆಗೀಡು ಮಾಡಿತ್ತು. ಅದಲ್ಲದೆ ಕಮೆಂಟ್ ಮಾಡಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು.

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ "ಎಲ್ಲಾ ಚೆನ್ನಾಗಿದೆ". 'ಸರಿ, ಅವರು 2022-2023 ರ ಹಿಂದಿನ ವರ್ಷದ ಎಲ್ಲಾ ಚಿತ್ರಗಳನ್ನು ಅಳಿಸಿದ್ದಾರೆ. ಇದು ಅವರ ಮದುವೆಯ ಚಿತ್ರಗಳ ಬಗ್ಗೆ ಮಾತ್ರವಲ್ಲ. ವಾಸ್ತವವಾಗಿ, ದೀಪಿಕಾ ಅವರೊಂದಿಗಿನ ಅವರ ಎಲ್ಲಾ ಇತ್ತೀಚಿನ ಚಿತ್ರಗಳು ಇನ್ನೂ ಅವರ ಹ್ಯಾಂಡಲ್‌ನಲ್ಲಿವೆ. ಆದ್ದರಿಂದ, ಸ್ವರ್ಗದಲ್ಲಿ ಯಾವುದೇ ತೊಂದರೆ ಇದೆ ಎಂದು ಜನರು ಹೇಗೆ ಊಹಿಸುತ್ತಾರೆ ಎಂಬುದು ನಿಜವಾಗಿಯೂ ದಿಗ್ಭ್ರಮೆಗೊಳಿಸುವ ಸಂಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

2018 ರ ನವೆಂಬರ್ 14 ರಂದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹವಾದರು. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳು ಈ ವರ್ಷ ಫೆಬ್ರವರಿ 29 ರಂದು ಈ ವಿಚಾರವನ್ನು ಘೋಷಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಮುಂದಿನ ಸುದ್ದಿ
Show comments