ವಂಡಲೂರು ಮೃಗಲಾಯದಲ್ಲಿ ಶಿವಕಾರ್ತೀಕೇಯನ್ ದತ್ತು ಪಡೆದಿದ್ದ ಸಿಂಹ ಕೊನೆಗೂ ಪತ್ತೆ

Sampriya
ಸೋಮವಾರ, 6 ಅಕ್ಟೋಬರ್ 2025 (20:19 IST)
Photo Credit X
ಚೆನ್ನೈ: ತಮಿಳು ನಟ ಶಿವಕಾರ್ತೀಕೇಯನ್ ಅವರು ತಮಿಳುನಾಡಿನ ವಂಡಲೂರು ಮೃಗಾಲಯದಲ್ಲಿ ದತ್ತು ಪಡೆದಿದ್ದ ಸಿಂಹವೊಂದು ನಾಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಇದೀಗ 2‌ ದಿನಗಳ ಬಳಿಕ ಸಿಂಹ ಪತ್ತೆಯಾಗಿದ್ದು, ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಆರು ವರ್ಷದ ಗಂಡು ಸಿಂಹ ಶೆರ್ಯಾರ್ ಅನ್ನು ಗುರುವಾರ ಸಫಾರಿ ವಲಯಕ್ಕೆ ಬಿಟ್ಟ ಬಳಿಕ ತನ್ನ ಆವರಣಕ್ಕೆ ಹಿಂತಿರುಗದಿದ್ದಾಗ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಶನಿವಾರ ಸಂಜೆಯವರೆಗೂ ಸಿಂಹ ಆವರಣಕ್ಕೆ ಹಿಂತಿರುಗಿಲ್ಲ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಿಂಹವನ್ನು ವಂಡಲೂರಿಗೆ ತರಲಾಯಿತು. ಸಿಂಹ ಸಫಾರಿ ವಲಯದಲ್ಲಿ ಪ್ರಸ್ತುತ ಆರು ಸಿಂಹಗಳಿವೆ. ಇವುಗಳಲ್ಲಿ ಎರಡನ್ನು ಮಾತ್ರ ಸಂದರ್ಶಕರು ವೀಕ್ಷಿಸಲು ಅನುಮತಿಸಲಾಗಿದೆ. ಉಳಿದವು ಪಂಜರದಲ್ಲಿವೆ.

ಸಿಂಹದ ಪತ್ತೆಗೆ ಮುಖ್ಯ ವನ್ಯಜೀವಿ ವಾರ್ಡನ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆಯನ್ನು ನೇಮಿಸಲಾಗಿದೆ. ಐದು ತಂಡಗಳು ವಿಶೇಷ ತಪಾಸಣೆ ಆರಂಭಿಸಿವೆ. ಸಫಾರಿ ಪ್ರದೇಶದಿಂದ ಪ್ರವಾಸಿಗರನ್ನು ನಿಷೇಧಿಸಲಾಗಿದೆ. 

ಆತಂಕ ಪಡುವ ಅಗತ್ಯವಿಲ್ಲ ಎಂದು ಮೃಗಾಲಯದ ನಿರ್ದೇಶಕ ರಿಟ್ಟೊ ಸಿರಿಯಾಕ್ ಹೇಳಿದ್ದಾರೆ. ಸಫಾರಿ ಪ್ರದೇಶದ ಸುತ್ತಲೂ ಎತ್ತರದ ಸುತ್ತುಗೋಡೆ ಮತ್ತು ತಂತಿಬೇಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments