Select Your Language

Notifications

webdunia
webdunia
webdunia
webdunia

'ದಿ ಡರ್ಟಿ ಪಿಕ್ಚರ್' 13 ವರ್ಷಗಳ ಬಳಿಕ ಮತ್ತೊಂದು ಸಿಲ್ಕ್‌ ಸ್ಮಿತಾ ಬಯೋಪಿಕ್‌

Silk Smitha: Queen of the South, Silk Smitha Life Tragedy, Silk Smith Biopic

Sampriya

ಮುಂಬೈ , ಸೋಮವಾರ, 2 ಡಿಸೆಂಬರ್ 2024 (16:27 IST)
Photo Courtesy X
ದಕ್ಷಿಣ ಭಾರತದ ಬೆಳ್ಳಿತೆರೆಯ ಮೋಹಿನಿ, 1980 ರ ದಶಕದಲ್ಲಿ ಅನೇಕ ವರ್ಷಗಳ ಕಾಲ ಮಾರ್ಕ್ಯೂಸ್ ಅನ್ನು ಆಳಿದ ಐಟಂ ಡ್ಯಾನ್ಸರ್‌ ಸಿಲ್ಕ್ ಸ್ಮಿತಾ ಅವರ 62ನೇ ಹುಟ್ಟುಹಬ್ಬ ಹಿನ್ನೆಲೆ ಬಯೋಪಿಕ್‌ ಸಿನಿಮಾವನ್ನು ಎಸ್‌ಟಿಆರ್‌ಐ ಸಂಸ್ಥೆ ಘೋಷಣೆ ಮಾಡಿದೆ.  ಸಿನಿಮಾಗೆ ಸಿಲ್ಕ್‌ ಸ್ಮಿತಾ ಕ್ವೀನ್ ಆಫ್ ದಿ ಸೌತ್ ಎಂದು ಶೀರ್ಷಿಕೆ ಇಡಲಾಗಿದೆ.

ಸಿಲ್ಕ್‌ ಸ್ಮಿತಾ ಅವರ  ಬಯೋಪಿಕ್‌ನಲ್ಲಿ ವಿದ್ಯಾ ಬಾಲನ್ ನಟಿಸಿದ 2011 ರ ಬ್ಲಾಕ್‌ಬಸ್ಟರ್ 'ಡರ್ಟಿ ಪಿಕ್ಚರ್' ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಇದೀಗ ಅವರ 64 ನೇ ಜನ್ಮ ವಾರ್ಷಿಕೋತ್ಸವದಂದು ಎಸ್‌ಟಿಆರ್‌ಪಿ ಮತ್ತೊಂದು ಬಯೋಪಿಕ್ ಅನ್ನು ಘೋಷಣೆ ಮಾಡಿದೆ.

ಸಿಲ್ಕ್ ಸ್ಮಿತಾ ಪಾತ್ರಕ್ಕೆ ಈ ಸಿನಿಮಾದಲ್ಲಿ ಚಂದ್ರಿಕಾ ರವಿ ಅವರು ಜೀವ ತುಂಬಲಿದ್ದಾರೆ. 'ಸಿಲ್ಕ್ ಸ್ಮಿತಾ: ಕ್ವೀನ್ ಆಫ್ ದಿ ಸೌತ್.' ಅಧಿಕೃತ ಜೀವನಚರಿತ್ರೆಯು ಅಪ್ರತಿಮ ನಟಿಯ ಕುತೂಹಲಕಾರಿ ಪ್ರಯಾಣವನ್ನು ನಿರೂಪಿಸಲು ಸಿದ್ಧವಾಗಿದೆ ಎಂದು ಹೇಳಲಾಗಿದೆ.

ಈ ಸಿನಿಮಾದ ಜಯರಾಮ್ ಶಂಕರನ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಎಸ್‌ಪಿ ಅವರು ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರಿಗೆ ಬರ್ತ್‌ಡೇ ಸಂಭ್ರಮ: ಮುದ್ದಾದ ವಿಡಿಯೋ ಹಂಚಿಕೊಂಡು ಖುಷಿಪಟ್ಟ ಯಶ್‌–ರಾಧಿಕಾ